ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-ಗಜಲ್

ಗಜಲ್

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ

ಗಜಲ್

ರಂಗಿನ ಮರಕುಟ್ಟಿಗದ ಹಕ್ಕಿಯ
ಮಾಧುರ್ಯ ನೋಡಿದೆ ಗೆಳತಿ/
ಚಂದದಿ ಅಂದದಗುಡ್ಡದ ಮೇಲೆಯೇ
ಕುಳಿತು ಹಾಡಿದೆ ಗೆಳತಿ//

ಅದರ ಪರಿಶ್ರಮಮುಂದೆ ನಮ್ಮಯ
ಶ್ರಮವು ಸಾಟಿಯಾಗುವುದೇ/
ಅಂಬರ ಪ್ರಕಾಶಮಾನದಿ ಬೆಳಗಿ ಪ್ರಕೃತಿ ಕಾಡಿದೆ ಗೆಳತಿ//

ಗವಿದ ಕತ್ತಲೆಯೊಳಗೆ ಬಿಳುಪು ಒಂದಾಗಿ ಪ್ರಜ್ವಲಿಸುವುದೇ/
ಭುವನ ಅಂದಗಾತಿಯಂತೆ ಸೆಳೆದು
ಗೆಲವು ಮಾಡಿದೆ ಗೆಳತಿ//

ಚೂಪದ ಉದ್ದಕೊಕ್ಕಿನಲಿ ವೃಕ್ಷವ
ಕುಕ್ಕುತ ಗೂಡಕಟ್ಟುವುದೇ/
ಮಮತೆ ಬದ್ಧತೆಯೊಂದಿಗೆ ಮರಿಯ
ರಕ್ಷಣೆ ಬೇಡಿದೆ ಗೆಳತಿ//

ಕಟ್ಟೆಯ ನಿಷ್ಕಲ್ಮಶವಾದ ಅರ್ತಿಗೆ
ನಂಜನು ನೀ ಇಟ್ಟುಹೋದೆಯಾ/
ಕಪಟ ಜಾಲದೊಳಗೆನೇ ಸಿಲುಕಿ
ಶೋಕವ ಪಾಡಿದೆ ಗೆಳತಿ//


3 thoughts on “ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ-ಗಜಲ್

  1. ತುಂಬಾ ಚೆನ್ನಾಗಿದೆ ಸರ್. ಅಭಿನಂದನೆಗಳು

Leave a Reply

Back To Top