ನಿಜಗುಣಿ ಎಸ್ ಕೆಂಗನಾಳ ಕವಿತೆ-ನಿನ್ನ ಬಯಕೆ.

ಕಾವ್ಯ ಸಂಗಾತಿ

ನಿನ್ನ ಬಯಕೆ.

ನಿಜಗುಣಿ ಎಸ್ ಕೆಂಗನಾಳ

ನನ್ನ ಬಯಕೆ ನೀನಾದರೆ.
ನಿನ್ನ ಕವಿತೆ ನಾನಾಗುವೆ.
ನನ್ನ ಉಸಿರು ನೀನಾದರೆ.
ನಿನ್ನ ಹಸಿರು ನಾನಾಗುವೆ.

ನನ್ನ ಬದುಕು ನೀನಾದರೆ.
ನಿನ್ನ ಬಯಕೆ ನಾನಾಗುವೆ.
ನನ್ನ ಕನಸು ನೀನಾದರೆ.
ನಿನ್ನ ಮನಸು ನಾನಾಗುವೆ.

ನನಗೆ ಸ್ಪೂರ್ತಿ ನೀನಾದರೆ.
ನಿನಗೆ ಆಸರೆ ನಾನಾಗುವೆ.
ನನಗೆ ಬರಹವೇ ನೀನಾದರೆ.
ನಿನಗೆ ವಿರಹವೇ ನಾನಾಗುವೆ.

ನನಗೆ ಹೂವೇ ನೀನಾದರೆ.
ನಿನಗೆ ಪರಿಮಳವೇ ನಾನಾಗುವೆ.
ನನಗೆ ಗಂಧವೇ ನೀನಾದರೆ.
ನಿನಗೆ ಕಾಂತಿಯೆ ನಾನಾಗುವೆ.


One thought on “ನಿಜಗುಣಿ ಎಸ್ ಕೆಂಗನಾಳ ಕವಿತೆ-ನಿನ್ನ ಬಯಕೆ.

Leave a Reply

Back To Top