ನಿಜಗುಣಿ ಎಸ್ ಕೆಂಗನಾಳ ಕವಿತೆ- ಕನಸುಗಾರನ ಒಂದು ಕನಸು.

njaguni

ಕಾವ್ಯ ಸಂಗಾತಿ

ಕನಸುಗಾರನ ಒಂದು ಕನಸು.

ನಿಜಗುಣಿ ಎಸ್ ಕೆಂಗನಾಳ

ಕನಸುಗಾರನ ಕಣ್ಣುಗಳಲ್ಲಿ
ಬರಿ ಕನಸುಗಳದ್ದೆ ಹಾವಳಿ.
ಅವನಿಲ್ಲದೆ ಕನಸುಗಳಿಲ್ಲ.
ಕನಸುಗಳಿಲ್ಲದೆ ಅವನಿಲ್ಲ.

ಕನಸೇ ಅವನ ಪ್ರಪಂಚ.
ಕನಸೇ ಅವನಿಗೆ ಜೀವಂತ.
ಕನಸಿಲ್ಲದೆ ಅವನಿಲ್ಲ.
ಅವನಿಲ್ಲದೆ ಕನಸುಗಳೆ ಇಲ್ಲ.

ಕಣ್ಣಲೆ ಕನಸುಗಳನ್ನ ಕಟ್ಟಿ
ಕಲ್ಪನೆಯಲ್ಲೆ ನಾಲ್ಕು ಬಿತ್ತಿ.
ಓದುಗರ ಮನದಲ್ಲಿ
ದೀಪ ಬೆಳಗುವುದೇ
ಕನಸುಗಾರ ಒಂದು ಕನಸಂತೆ.


Leave a Reply

Back To Top