ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಕಳೆದು ಹೋದವಳನು ಹುಡುಕುತಿರುವೆ
ಕನ್ನಡಿಯಲಿ ಕಾಣದವಳನು ಹುಡುಕುತಿರುವೆ
ಮನದ ಮೂಲೆಯೇ ಮಸಣವಾಯಿತು
ಆಸೆಗಳ ಕೊಂದವಳನು ಹುಡುಕುತಿರುವೆ
ಹೆಣೆದ ಭರವಸೆಯ ಜೋಳಿಗೆ ಜಾಳಾಯಿತು
ಬಾಳಿಗೆ ಬದುವು ಕಟ್ಟಿದವಳನು ಹುಡುಕುತಿರುವೆ
ಕಂಗಳಂದು ಕನಸುಗಳ ತೇರೆಳೆಯುತಿದ್ದವು
ಹುಸಿನಗೆಯಲಿ ಮರೆಯಾದವಳನು ಹುಡುಕುತಿರುವೆ
ತನಗರಿವಿಲ್ಲದೆ ಬದಲಾಗುತ ನಡೆದಳು ‘ವಾಣಿ ‘
ತನಗೂ ತಾ ಸಿಗದವಳನು ಹುಡುಕುತಿರುವೆ
———————
Very beautiful