ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ- ನೀನಾದೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ನೀನಾದೆ

ಒಂಟಿಯಾಗಿ ನಡೆಯುತ್ತಿದ್ದೆ
ಗುಡುಗು ಸಿಡಿಲು ಮಿಂಚು
ರಭಸ ಮಳೆ ದಟ್ಟ ಕಾಡು
ನೀನಾದೆ ಎನಗೆ ಕೊಡೆ

ಬೆಟ್ಟ ಗಿರಿ ಪರ್ವತ
ಹತ್ತಿ ಹೋಗಬೇಕು ಮೇಲೆ
ಕಲ್ಲು ಮುಳ್ಳು ಹೊದಿಕೆ
ನೀನಾದೆ ಊರುಗೋಲು

ಮುಂದೆ ದೊಡ್ಡ ಸಾಗರ
ರುದ್ರ ಅಲೆ ಚಂಡ ಮಾರುತ
ಜಲಚರ ಮೀನು ತಿಮಿಂಗಲು
ನೀನಾದೆ ಹರಿಗೋಲು

ಹಲವು ಕನಸು ಬಯಕೆ
ಚಿಗುರೊಡೆದವು ನೆಲದಲ್ಲಿ
ಬಿಸಿಲು ಬೇಗೆ ಬರದ ಬೇನೆ
ನೀನಾದೆ ಹೆಮ್ಮರ

ಹಸಿದ ಒಡಲು
ಪ್ರೀತಿ ಕಡಲು
ಬಾಳ ಬದುಕಿಗೆ
ನೀನಾದೆ ಜೀವ ಜಲ


One thought on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ- ನೀನಾದೆ

Leave a Reply

Back To Top