ಪ್ರಕಾಶ್ ಆರ್ ಕವಿತೆ-ಸ್ತ್ರೀ

ಕಾವ್ಯ ಸಂಗಾತಿ

ಸ್ತ್ರೀ

ಪ್ರಕಾಶ್ ಆರ್.

ಸ್ತ್ರೀ ಎಂದೇ ಅವಳ ಹೆಸರು
ಸಹನೆ ಕ್ಷಮೆ ನಾಚಿಕೆ ಅವಳುಸಿರು
ಸಾಧನೆಯ ಶಿಖರವೇ ಅವಳ ಗುರಿ
ತಡೆಯುವವಿರೇಕೆ ಅವಳ ದಾರಿ

ತನ್ನಿಚ್ಛೆಯಂತೆ ಹಾರಲು ಬಿಟ್ಟು ಬಿಡಿ
ಪಂಜರದೊಳಗಿಟ್ಟು ಹಾಕದಿರಿ ಬೇಡಿ
ಅವಳ ಮುಟ್ಟಿನಿಂದಲೇ ನಿನ್ನ ಹುಟ್ಟು
ಮುಟ್ಟಬೇಡ ಮತ್ತೆ ಮಾತು ಕೊಟ್ಟು

ಚಿವುಟಬೇಡವೋ ಅವಳೊಂದು ಹೂವು
ಸಹಿಸಲಾರಳು ನೀಡುವ ನೋವು
ಪರಿವರ್ತಿಸದಿರು ಅವಳನ್ನು ಮುಳ್ಳಾಗಿ
ಚುಚ್ಚೀತು ಕೊನೆಗೆ ನಿನ್ನೆದೆಗೆ

ನಿನ್ನ ಹೃದಯವು ಕಲ್ಲಾಗಿದೆ
ಬಿಸುಡು ಅದನು ಹೊರಗೆ
ತುಂಬಿಕೊ ಅವಳನ್ನು ಮನದೊಳಗೆ
ಕಲ್ಲನ್ನು ಅರಳಿಸುವಳು ಮೆಲ್ಲಗೆ


Leave a Reply

Back To Top