ಆಶಾ ಯಮಕನಮರಡಿ ಭಾವಗೀತೆ

ಕಾವ್ಯ ಸಂಗಾತಿ

ಭಾವಗೀತೆ

ಆಶಾ ಯಮಕನಮರಡಿ

ಭಾವದಲೆಗಳ ಭೋರ್ಗರೆತದ
ಮೊರೆತವದು ಸಾರಿ ಹೇಳುತ್ತಿದೆ
ಕೇಳು ಸಖಾ ನಿನ್ನ ಹೆಸರನು

ಒಲವ ವೀಣೆಯ ರಾಗಾಲಾಪದಿ
ಬೆರೆತು ಸ್ವರವೆತ್ತಿ ಹಾಡುವ
ದನಿಯ ಇಂಪಿನಲಿ ನಿನ್ನದೆ
ಗುಣಗಾಣವಿದೆ ಕೇಳು ಸಖಾ

ಕನಸ ಇರುಳಿನ ಬಾನತುಂಬೆಲ್ಲಾ
ಸವಿನೆನಪಿನ ಚುಕ್ಕೆಗಳು ಮಿಣುಗುತಿವೆ
ನಡುವೆ ನಲಿವ ಚಂದಿರನ
ನಿಜ ರೂಪ ನೀನೆ ಸಖಾ

ಬಿರಿದರಳಿರ ನಲಿವಿನಾ ನಗೆಮೊಲ್ಲೆಯ ಅರಳು ನೀ
ಸುಖದ ಸಗ್ಗದ ಸಡಗರದ ನಡುವೆ
ಬಯಕೆಯಲ್ಲಿ ಬಳಲಿದಾ ಕಣ್ಣ ಹನಿಗೆ ನೀನೆ ಕಾರಣ ಸಖಾ


ಆಶಾ ಯಮಕನಮರಡಿ

Leave a Reply

Back To Top