ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹಿಡಿದ ಕನ್ನಡಿ

ಕಾವ್ಯ ಸಂಗಾತಿ

ಹಿಡಿದ ಕನ್ನಡಿ

ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

ಮಾತು ಬಾಡಿ
ಶಬ್ದ. ಅಡಗಿ
ಮೌನ ಉಳಿಯಿತು
ನಮ್ಮ ನಡುವೆ

ದೂರ ಊರಿನ
ಪಯಣ ನಿಂತು
ಕವಲು ದಾರಿಗೆ
ಹೆಜ್ಜೆ ಗುರುತು

ಅಂದು ನಕ್ಕು
ನಲಿದ ಕ್ಷಣಗಳು
ಇಂದು ಮರೆಗೆ
ಮರೆತು ಹೋದವು

ಸ್ನೇಹ ಪ್ರೀತಿ ನಂಬಿಕೆ
ಕೈ ಹಿಡಿದ ಕನ್ನಡಿ
ಒಡೆದ ಕಾಜು ನಕ್ಕಿತು
ಬರೆಯಲಾಗದ ಮುನ್ನುಡಿ


3 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹಿಡಿದ ಕನ್ನಡಿ

Leave a Reply

Back To Top