ಮಮತಾ ಶೃಂಗೇರಿ. ಹುಣ್ಣಿಮೆ ಚಂದ್ರ. 

ಕಾವ್ಯ ಸಂಗಾತಿ

ಹುಣ್ಣಿಮೆ ಚಂದ್ರ. 

ಮಮತಾ ಶೃಂಗೇರಿ. 

ಹಾಲುಗಲ್ಲದ ಮುದ್ದು ಕಂದ,
ನೋಡಲು ಇವನು ಹುಣ್ಣಿಮೆಚಂದ್ರ.
ನಕ್ಕರೆ ಸುರಿವುದು ಮುತ್ತು,
ತನ್ನ ಸುತ್ತ ಮುತ್ತಲೆಲ್ಲಾ..

ತುಂಬು ಕೆನ್ನೆ ಕೆಂಪಾದ ಗಲ್ಲ,
ಬೆಳದಿಂಗಳ ನಗೆಯು ಇವನದೇ ಅಲ್ವಾ?
ಅಗಲಿಸುತ ತನ್ನ ಅರಳುಗಣ್ಣ,
ನೋಡಿಹನು ತನ್ನ ಅಮ್ಮನನ್ನ.

ಮುದ್ದು ಮೊಗದ ಈ ಪೋರ,
ಕಂಡವರ ಚಿತ್ತ ಸೆಳೆಯುವ ಚೋರ,
ಹೆತ್ತವರ ಮುದ್ದಿನ ಕುವರ,
ತೆಗೆಯುವೆ ದೃಷ್ಠಿ ಒಮ್ಮೆ ಹತ್ತಿರ ಬಾರ.


One thought on “ಮಮತಾ ಶೃಂಗೇರಿ. ಹುಣ್ಣಿಮೆ ಚಂದ್ರ. 

Leave a Reply

Back To Top