ಕಾವ್ಯ ಸಂಗಾತಿ
ಎಂ. ಆರ್. ಅನಸೂಯ
ಧಿಕ್ಕಾರ
ಮಾತುಗಳಿಂದ ಇರಿದವರೇ
ತಿಳಿಸಿದ್ದು
ಮಾತಿಗಿಂತ ಮೌನದ ಮೌಲ್ಯವ
ಅಸಹಿಷ್ಣುಗಳ ಶ್ರೇಷ್ಟತೆಯ ವ್ಯಸನಿಗಳೇ
ಬೆಳೆಸಿದ್ದು
ಭಿನ್ನತೆಯ ಸಹಿಸುವ ಸಹನೆಯ
ಮನುಜರಲ್ಲದ ಜನರ ನಿರ್ದಯತೆಯೇ
ತುಂಬಿಸಿದ್ದು
ಎನ್ನೆದೆಯಲಿ ಆರ್ದ್ರ ಮಾರ್ದವತೆಯ
ಶೋಷಕರ ಅಮಾನವೀಯ ಶೋಷಣೆಯೆ
ಮೂಡಿಸಿದ್ದು
ಸಮತೆಗೆ ಮಿಡಿವ ಸಹೃದಯತೆಯ
ಆದರೂ
ಹೇಳುವೆ ನಾನವರಿಗೆ ಧಿಕ್ಕಾರ !