ಇಮಾಮ್ ಮದ್ಗಾರ ಕವಿತೆ-ಪ್ರಶ್ನೆ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಪ್ರಶ್ನೆ

ನಂಗೊತ್ತು..
ನನ್ನ ಮನದ
ಮಾತು..
ನಿನಗರ್ಥ ವಾಗಿದೆ !!

ನಿನ್ನ ಕನಸಿಗೆ
ನನ್ನಾ..ಗಮನ
ವಾಗಿಹೋಗಿದೆ !!

ಸಾಯುವ
ಚಂದಿರನ ಸುತ್ತ
ನಕ್ಷತ್ರಗಳು
ತಿರುಗುವ ಹಾ..ಗೇ !

ಹುಟ್ಟುವ
ಸೂರ್ಯನ
ಸುತ್ತ ಧರೆ
ಸುತ್ತುವ ಹಾಗೇ !!

ನಿನ್ನದೆಯ
ಸಾ…ಗರದ
ಸುತ್ತ ಸುತ್ತುತ್ತಿದೆ
ನನ್ನ ಮನದ
ಹಾಯಿ !!!

ಪ್ರತಿ ರಾತ್ರಿಯೂ
ನನ್ನ ಕಾಡುತ್ತವೆ
ನಿನ್ನ ಕನಸುಗಳು
ದಿವಿನಾಗಿ

ಅರಿನಿದ್ದೆಯಲೂ.‌
ನನ್ನೆದೆಯ ಗೂಡು
ಸುತ್ತುತ್ತಿವೆ ನಿನ್ನ
ನೆನಪು ಗಳು
ಜೇನಾಗಿ

ಯಾ..ವ ಕ್ಷಣ
ಈ..ಒಲವು
ಬಂತೋ ?
ನನ್ನೊಳಗೆ
ಕಣ್ಣ ಪರದೆ ದಾಟಿ ???

ಹಿರಿಯರ ಮಾತು
ನಿಜವಿರ ಬಹುದು !
ತಿನ್ನುವ ಪ್ರತಿ ಕಾಳಿನಲೂ..
ತಿನ್ನೊರ ಹೆಸರು
ಕೆತ್ತಿಹುದು !!!

ಅದ್ಯಾವ
ಭ್ರಾಂತಿಯಲಿ
ನಾನು
ಬಡ ಬಡಿಸಿದೆನೋ !!!

ನನಗಂತೂ
ಗೊತ್ತಿಲ್ಲ
ನನಗಂತೂ
ನೆನಪಿಲ್ಲ

ನನಗೂ
ಗೊತ್ತಿರುವದು
ಒಂದೇ..
ನಾನು ನಿನ್ನ
ದುಶ್ಮನ್ !!!

ದುಶ್ಮನ್
ಮೇಲೆಯೂ..
ಪ್ರೀತಿ ಹುಟ್ಟುತ್ತಾ ???


Leave a Reply

Back To Top