ಮಕ್ಕಳಪದ್ಯಗಳು

ಅರುಣ ರಾವ್

ಮರಗಳು

ಹೊಂಗೆಯ ಮರವೇ ಎಣ್ಣೆಯ ನೀಡು
ಮಾವಿನ ಮರವೇ ಹಣ್ಣನು ನೀಡು
ಬೇವಿನ ಮರವೇ ಎಲೆಗಳ ನೀಡು
ನೀನಿದ್ದರೆ ನಾನಿರುವೆನು ಕೇಳು

ತೆಂಗಿನ ಮರವೇ ಫಲವನು ನೀಡು
ನಲ್ಲೀಕಾಯಿಯೆ ಸತ್ವವ ನೀಡು
ಹಲಸಿಗೆ ಮಕ್ಕಳು ಹಲವರು ನೋಡು
ನೀನಿದ್ದರೆ ನಾನಿರುವೆನು ಕೇಳು

ಅಡಿಕೆಯು ಆಗಸದಲ್ಲಿದೆ ನೋಡು
ಮಳ್ಳಿ ಸೀಬೆಯು ಕುಳ್ಳಿಯು ಕೇಳು
ಹುಣಸೆ ಮರದಲಿ ಚಿಗುರದು ಜೋರು
ನೀನಿದ್ದರೆ ನಾನಿರುವೆನು ಕೇಳು

ಮನೆ ಮುಂಗಡೆ ಮರವನು ನೆಟ್ಟು
ನೀರು ಗೊಬ್ಬರ ಸಮಯದಿ ನೀಡು
ಫಲವನು ನೀಡುವ ಸೊಬಗನು ಕಾಣು
ಸೃಷ್ಠಿಯ ಸಮತೋಲನ ಕಾಪಾಡು


Leave a Reply

Back To Top