ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾವಲುಗಾರ

ಡಾ ಅನ್ನಪೂರ್ಣ ಹಿರೇಮಠ

ನಿನ್ನಂತ ಜೊತೆಗಾರ ಯಾರಿಲ್ಲ ತಂದೆ
ಎನ್ನ ಕಾವಲಿಗೆ ನಿಲ್ಲಬೇಕು ತಂದೆ//ಪ//

ಉಸಿರಲ್ಲಿ ಉಸಿರಾಗಿ ಬೆರೆತುಬಿಡು ತಂದೆ
ಬಾಳಲ್ಲಿ ಹಸಿರಾಗಿ ಕಂಗೊಳಿಸು ತಂದೆ
ನೆನಪಿನ ನೆನಹಾಗಿ ಉಳಿದುಬಿಡು ತಂದೆ
ಜೀವದ ಜೀವದಲಿ ಇದ್ದುಬಿಡು ತಂದೆ//

ಅಂತರಾತ್ಮದ ಒಡೆಯ ನೀನಾಗು ತಂದೆ
ಬಾಳ ಜ್ಯೋತಿಗೆ ತೈಲ ಎರೆಯುತಿರು ತಂದೆ
ಒದಲಾಳದ ಶಾಂತಿಗೆ ದೊರೆಯಾಗು ತಂದೆ
ಹೃದಯ ಮಂದಿರದಲ್ಲಿ ನೆಲೆಸಿ ಬಿಡು ತಂದೆ//

ನಿನ್ನಂತ ಹಿತ ಬಂಧು ನನಗಿಲ್ಲ ತಂದೆ
ನೆನೆದಾಗ ಕಣ್ಮುಂದೆ ಬಂದುಬಿಡು ತಂದೆ
ಕರೆದಾಗ ನನ್ನೊಂದಿಗೆ ಇದ್ದುಬಿಡು ತಂದೆ
ವರವನಿನ್ನೆನನು ಕೇಳಲಾರೆನು ತಂದೆ//

ಬಿದ್ದಾಗ ಏಳಲು ಆಸರೆಯು ನೀನಾಗು
ಸೋತಾಗ ಧೈರ್ಯ ಹೇಳೊ ದಯಸಾಗರ ನೀನು
ಧರ್ಮದಾ ಜೊತೆ ನಡೆಸೊ ಧೀಮಂತ ನೀನು
ಅಧರ್ಮ ಅಳಿಸಲು ಜಗಕೆ ಬರುವವ ನೀನು//

ಕಷ್ಟ ಸಂಕಷ್ಟಗಳ ಸಹಿಸೊ ಶಕ್ತಿಯು ನೀನೆ
ಸತ್ಕರ್ಮ ಸತ್ಪ್ರಾತ್ರಕ್ಕೆ ಸ್ಪೂರ್ತಿಯು ನೀನು
ಸಕಲವೆಲ್ಲವ ನುಡಿ ಸಲಹುವ ನೀನು
ಎಲ್ಲೆಲ್ಲೂ ಅಡಗಿರುವ ಪರಮಾತ್ಮ ನೀನು//

ನನ್ನ ನಗುವಲ್ಲಿ ನಗುವಾಗಿ ಜುಳುಗುಡು ತಂದೆ
ನನ್ನ ಕಣ್ಣೀರು ಒರೆಸುವ ಕೈಯಾಗು ತಂದೆ
ಪ್ರೀತಿ ಅಮೃತ ನೀಡೊ ಅರಸನಾಗು ತಂದೆ
ಒಲವ ಸುಧೆ ಹರಿಸೊ ಪ್ರೇಮಿಯಾಗು ತಂದೆ/


About The Author

1 thought on “ಡಾ ಅನ್ನಪೂರ್ಣ ಹಿರೇಮಠ-ಕಾವಲುಗಾರ”

Leave a Reply

You cannot copy content of this page

Scroll to Top