ಡಾ.ಪ್ರಿಯಂವದಾ-ಅಪ್ಪನ ನೆನಪು
ಅಪ್ಪನ ಬೆರಳು ಗಟ್ಟಿ ಮುಷ್ಟಿಯಲ್ಲಿ
ಅಪ್ಪನ ಪ್ರೀತಿ ಶಾಶ್ವತ ಹೃದಯದಲ್ಲಿ
ಅಪ್ಪನ ಆದರ್ಶ ಮಾರ್ಗದರ್ಶನ ಬಾಳಿನಲ್ಲಿ
ಅಪ್ಪನ ಸಹನೆ ಸಹಕಾರ ಸದಾ ಜೀವನದಲ್ಲಿ ||
ಅಪ್ಪ ನನ್ನ ಬದುಕ ಕಟ್ಟಿದ
ಅಪ್ಪ ನನ್ನ ಭವಿಷ್ಯ ಬರೆದ
ಅಪ್ಪ ನನ್ನ ವರ್ತಮಾನದ ಆಸರೆ
ಅಪ್ಪ ಬೆನ್ನ ಹಿಂದಿನ ಭರವಸೆ||
ಬೈದು ಹೇಳಿದ ಬುದ್ಧಿ ಮಾತು
ತಿದ್ಧಿ ಹೇಳಿದ ಬದುಕಿನ ಸೂತ್ರ
ನಡೆದು ತೋರಿದ ಶುದ್ಧ ಮಾರ್ಗ
ಆಡಿ ತೋರಿಸಿದ ನೇರ ನುಡಿಯ ||
ಕಷ್ಟ ತನಗೆ ಇಷ್ಟಪಟ್ಟಿದ್ದೆಲ್ಲ ನನಗೆ ನೋವು ತನಗೆ ನಲಿವು ಕುಟುಂಬಕ್ಕೆ
ಅಪ್ಪನ ತ್ಯಾಗಕ್ಕೆ ಬೆಲೆ ಅಗಣಿತ
ಅಪ್ಪನ ಭಾವಕ್ಕೆ ಅಕ್ಷರ ಅನಂತ.||