ಕಾವ್ಯ ಸಂಗಾತಿ
ಹೃದಯ ಕಲ್ಲಾಗಿದೆ..
ನಿಶ್ಚಿತ.ಎಸ್
ಅಂದುಕೊಂಡದ್ದು ಸುಳ್ಳಾಯಿತು..
ಭರವಸೆಯ ಹಾದಿಯು ಮರೆಯಾಯಿತು.
ಭಾವನೆಗಳು ಬದಲಾಯಿತು..
ಯಾಕೋ ಹೃದಯ ಕಲ್ಲಾಯಿತು……
ಮಳೆಯು ಅಪ್ಪಳಿಸಿದಂತೆ..
ಮಾತುಗಳೇಲ್ಲ ಮೌನವಾಯಿತು..
ಸಿಡಿಲು ಸಿಡಿದರೂ, ಮಿಂಚು ಮಿನುಗಿದರೂ..
ಆತಂಕವೇ ಆಗದೇ ಹೃದಯ ಕಲ್ಲಾಯಿತು…
ಸಂತೋಷ, ದುಃಖ ಎಲ್ಲವೂ ಸ್ತಬ್ದವಾದಂತೆ..
ತೆರೆಮರೆಗಳ ನಡುವೆ ಚಿತ್ತವು ಹೊಡೆದಂತೆ..
ಯಾರ ಸಹವಾಸವನ್ನು ಬಯಸದೇ
ಹೃದಯ ಕಲ್ಲಾಯಿತಲ್ಲ…
ಎಲೆಗಳು ಉದರಿದಂತೆ ನಂಬಿಕೆಯು ಅಳಿಸಿ,,
ನೀರು ಹರಿಯುವ ರೀತಿ
ಕಣ್ಣೀರು ಹರಿದು..
ಬರಿ ಬಣ್ಣದ ಮಾತುಗಳ ಕೇಳಿ
ಹೃದಯ ಕಲ್ಲಾಯಿತಲ್ಲ…
ಕಲ್ಲಾಗಿರುವ ನನ್ನೀ ಹೃದಯ ಮತ್ತೇ ಶಿಲೆಯಾಗುವುದಾ?////ಕಲ್ಲಾಗೇ ಕರಗುವುದ???
ನಿಶ್ಚಿತ.ಎಸ್