ಮಾಜಾನ್ ಮಸ್ಕಿ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಜಾನ್ ಪದ್ಯಗಳು

ಬಡತನದಲ್ಲಿ ಬದುಕು ಕಟ್ಟಿಕೊಳ್ಳುವ ಜಾಣ್ಮೆ ಇದೆ
ಜಾನ್!!
ಶ್ರೀಮಂತಿಕೆಯಲ್ಲಿ ವಿಕೃತ ಭಾವನೆಗಳ ನರಳಾಟವಿದೆ

ಮೌಲ್ಯಯುತ ಬದುಕಿಗೆ ಸಾಥ್ ಕೊಡುವವರು ಕಡಿಮೆ
ಜಾನ್!!
ನಡೆಯುತ್ತಿರಬೇಕು ತಾಳ್ಮೆಯಿಂದ ಜೊತೆಯಾಗುವರು ಗಟ್ಟಿತನದಲ್ಲಿ

ಕಾವಿ ಬಟ್ಟೆ ತೊಟ್ಟು ಸನ್ಯಾಸಿ ಆಗಿರುವುದು ಸುಲಭ
ಜಾನ್!!
ಬಣ್ಣಗಳ ಬಟ್ಟೆ ಉಟ್ಟು ಸನ್ಯಾಸಿ ಆಗಿರುವುದು ಕಠಿಣ!!

ಗೆಳೆಯನೊಬ್ಬ ಬೇಕೆಂದೇನು ಇಲ್ಲ ಬದುಕಿಗೆ
ಜಾನ್!!
ಏಕಾಂಗಿಯಲ್ಲಿದೆ ಸಾಧಿಸುವ ಆತ್ಮವಿಶ್ವಾಸ


ಮಾಜಾನ್ ಮಸ್ಕಿ

Leave a Reply

Back To Top