ಪ್ರಜ್ವಲಾ ಶೆಣೈ-ಮುಖವಾಡದ ಬದುಕು

ಕಾವ್ಯ ಸಂಗಾತಿ

ಪ್ರಜ್ವಲಾ ಶೆಣೈ

ಮುಖವಾಡದ ಬದುಕು

ನಕ್ಕಾಗ ನಗುವ ಅತ್ತಾಗ ಆಳುವ
ಕನ್ನಡಿಯು ನೀನು
ನನ್ನ ನೋವಿನ ಧ್ವನಿಗೆ ನಿನ್ನ
ಮೂಕ ಪ್ರತಿಧ್ವನಿ
ನನ್ನ ಅಳುವಿನ ಬಿಂಬಕೆ ನಿನ್ನ
ನಿರ್ಜೀವ ಪ್ರತಿಬಿಂಬ
ಇದು ಮುಖವಾಡದ ಬದುಕು…..

ಸೋತಾಗ ಛಲವ ಗೆದ್ದಾಗ ಬಲವ
ಬೀರುವ ಛಲಗಾತಿ ನಾನು
ನನ್ನ ನಗುವಿನ ಮೊಗಕೆ ನಿನ್ನ
ನಿರ್ಲಿಪ್ತ ಭಾವ
ನನ್ನ ವೇದನೆಯ ಚಿತ್ತಕೆ ನಿನ್ನ
ಸುಪ್ತ ಅಹಂಭಾವ
ಇದು ಮುಖವಾಡದ ಬದುಕು……

ನಾನು ಬಲವೆಂದರೆ ನೀನು ಎಡ
ನಾ ಮುಂದೆ ಎಂದರೆ ನೀ ಹಿಂದೆ
ಅದಲು ಬದಲಿನ ಹಾವು ಏಣಿ ಆಟ
ಸೋಲು ಗೆಲುವಿನ ಸೆಣಸಾಟ
ಇದು ಮುಖವಾಡದ ಬದುಕು….

———————-


ಪ್ರಜ್ವಲಾ ಶೆಣೈ

One thought on “ಪ್ರಜ್ವಲಾ ಶೆಣೈ-ಮುಖವಾಡದ ಬದುಕು

Leave a Reply

Back To Top