ಡಾ ಅನ್ನಪೂರ್ಣ ಹಿರೇಮಠ-ರಕ್ತದಾನ

ಕಾವ್ಯ ಸಂಗಾತಿ

ರಕ್ತದಾನ

ಡಾ ಅನ್ನಪೂರ್ಣ ಹಿರೇಮಠ

ದಾನದಲ್ಲಿ ಶ್ರೇಷ್ಠ
ರಕ್ತದಾನ ತಿಳಿಯೋ ತಮ್ಮಾ
ಸಾಯುವವನ ಬದುಕಿಸಿ
ಉಸಿರು ಕೊಟ್ಟು ಉಳಿಸುವುದು
ಜೀವಕ್ಕೆ ಜೀವ ಕೊಟ್ಟು
ದಾನ ಚಿರವಾಗುವುದು//

ಭೂದಾನ ಗೋ ದಾನ
ದನಕದಾ ದಾನ
ಕೊಡುವರು ಕೇಳು
ಕರ್ಮ ಕಳೆಯಲೆಂದು
ಇದು ಹಂಗಲ್ಲ ತಿಳಿತ ಮ್ಮಾ
ಇದು ಧರ್ಮ ಮೆರೆಸುವ ದಾನ//

ಹಸಿದವರಿಗೆ ಅನ್ನ
ನೊಂದವರಿಗೆ ಸಾಂತ್ವನ
ಬೆಂದು ಬೇಗುದಿಯಲ್ಲಿ
ಬಿದ್ದು ನರಳುವವರಿಗೆ
ಆಸರೆ ಕೊಟ್ಟು ಮೇಲೆತ್ತುವುದು
ಇವೆಲ್ಲಕ್ಕಿಂತ ಮಿಗಿಲು ತಮ್ಮಾ
ಹೃದಯ ನುಡಿಸುವ
ಹರಿವ ರಕ್ತದಾನ//

ಕಣ್ಣೀರಿಗೆ ಕರುಣೆ ದೂರು
ಕಷ್ಟಕ್ಕೆ ಸಹಕರಿಸು
ಪ್ರೀತಿಗೆ ಪ್ರೀತಿಯ ಕೊಡು
ಒಲವಿಗೆ ಅಂತಕರಣ ನೀಡು
ಜೀವಕ್ಕೆ ಜೀವ ನೀಡು
ಸಾಯುವವನ ಬದುಕಿಸಲು
ಶ್ರೇಷ್ಠ ದಾನ ರಕ್ತದಾನ//

ದಾನ ಕೊಟ್ಟರೆ ನಿನಗೆ
ಹಾನಿಯಾಗದು ಕೇಳು
ಕೊಟ್ಟಷ್ಟು ಹೆಚ್ಚಾಗಿ
ಪರಿಶುದ್ಧ ಆರೋಗ್ಯ
ಶಕ್ತಿಯೊಂದಿಗೆ ಯುಕ್ತಿ
ಸಾಕ್ಷಿ ಸಮ್ಮುಷ್ಠಿಯ ಸೃಷ್ಟಿ
ಸಿಗುವುದು ಜೀವನಕೆ ನಿಜ ಮುಕ್ತಿ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top