ನನ್ನದೇ ಗೀತೆ- ಪರಿಮಳ ಐವರ್ನಾಡು ಸುಳ್ಯ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ನನ್ನದೇ ಗೀತೆ

ನನ್ನದೇ ಭಾವಗೀತೆ
ಬಾರೆಂನೆಂದರು ಬರೆಸೆಳೆದು ಅಪ್ಪಿಕೊಳ್ಳಬಯಸುವ
ಸುಮಧುರ ಗೀತೆ

ನನ್ನದೇ ಶೋಕಗೀತೆ
ದೂರ ತಳ್ಳಿದರೂ ಬಾಚಿ ತಬ್ಬಿಕೊಳ್ಳುತ ಮುದ್ದಾಡುವ
ನೋವಿನ ಗೀತೆ

ನನ್ನದೇ ಆನಂದ ಗೀತೆ
ಕರೆದರೂ ಬರದೆ ಓಡುತೋಡುತ ದೂರ ಸಾಗುವ
ವಿರಹಗೀತೆ

ನನ್ನದೇ ಮೌನಗೀತೆ
ಆಹ್ವಾನವಿಲ್ಲದಿದ್ದರೂ ಮನಕೆ ನೆಮ್ಮದಿನೀಯುವ
ಶಾಶ್ವತಗೀತೆ


ಪರಿಮಳ ಐವರ್ನಾಡು ಸುಳ್ಯ

Leave a Reply

Back To Top