ಮಾಜಾನ್ ಮಸ್ಕಿ-ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಸೋಲುಗಳಲ್ಲಿಯೇ ಗೆಲವು ಇರಬೇಕು ಬಾಳಲಿ
ಮನದಲ್ಲಿ ಪ್ರೇಮ ತೇಜಸ್ಸಿನ ನಲಿವು ಇರಬೇಕು ಬಾಳಲಿ

ನಟನೆಯ ಪ್ರೀತಿ ಎಂದೆಂದಿಗೂ ಉಳಿಯದು ಗೆಳತಿ
ಅಹಂ ಇರದ ಹೊಂದಾಣಿಕೆ ಮನವು ಇರಬೇಕು ಬಾಳಲಿ

ತಬ್ಬುತ ಮಿಲನ ತಂಪಾಗಲಿ ಸುಂದರ ಕ್ಷಣಗಳು
ಇಳೆಯ ಝರಿಯಂತೆ ಒಲವು ಇರಬೇಕು ಬಾಳಲಿ

ಅರಳುವ ಮೊಗ್ಗುಗಳಲ್ಲಿ ಅನುಕರಣೆಯ ವಿನಮ್ರತೆ ಇದೆ
ಸಂಶಯ ಇರದ ನಂಬಿಕೆಯ ಬಲವು ಇರಬೇಕು ಬಾಳಲಿ

ಅದೆಂತಹ ಬೆಂಕಿ ಸುಡುವುದು ಈ ಮಂಜನ್ನು
” ಮಾಜಾ” ನೋವುಗಳ ಮರೆವು ಇರಬೇಕು ಬಾಳಲಿ


ಮಾಜಾನ್ ಮಸ್ಕಿ

Leave a Reply

Back To Top