ಸರಣಿ ಸತ್ಯ ಕಥೆಗಳು
ಕು.ಸ.ಮಧುಸೂದನರಂಗೇನಹಳ್ಳಿ
ಅಸಹಾಯಕ ಆತ್ಮಕಥೆಗಳು
ಓದುವ ಮುನ್ನ
ಈ ಕತೆಗಳ ಮೊದಲ ಕತೆಯ ಮೊದಲ ಸಾಲು ಓದುವ ಮೊದಲುನಿಮಗೆ ಹೇಳಬೇಕಾದ ಮಾತುಗಳು.
ಅದಾಗತೊಂಭತ್ತರ ದಶಕದಲ್ಲಿ ನಾನೊಮ್ಮೆ ಮುಂಬೈಗೆ ಹೋದಾಗ ಗೆಳೆಯರೊಬ್ಬರು ನಡೆಸು್ತಿದ್ದ ಹೆಚ್.ಐ,ವಿ. ಪೀಡಿತಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಬೇಟಿ ನೀಡಿದಾಗ, ಅಲ್ಲಿದ್ದ ಅನೇಕ ಹೆಣ್ಣು ಮಕ್ಕಳನ್ನು ಮಾತನಾಡಿಸಿದ್ದೆ.ಹಾಗೆ ಮಾತಾಡಿಸುವಾಗ ಸಿಕ್ಕ ಒಬ್ಬ ಹೆಣ್ಣು ಮಗಳು ನಮ್ಮ ಕನ್ನಡಿಗಳೇ ಆಗಿದ್ದು ತನ್ನ ಬದುಕಿನ ಅಮೂಲ್ಯವಾದ ಮುವತ್ತು ವರ್ಷ ಆಯುಷ್ಯವನ್ನು ಮುಂಬೈನ ವೇಶ್ಯಾವಾಟಿಕೆಯಲ್ಲಿ ಕಳೆದು ಹೆಚ್.ಐ.ವಿ ರೋಗಕ್ಕೆ ತುತ್ತಾಗಿದ್ದಳು.ಆಕೆಯ ಕಥೆ ಕೇಳಿ ನನಗೆ ಅಪಾರ ದು:ಖವಾಗಿದ್ದು ಮಾತ್ರವಲ್ಲದೆ, ಅಂತವರ ಬದುಕಿನ ವಾಸ್ತವಾಂಶಗಳ ಬಗ್ಗ ಬೆಳಕು ಚೆಲ್ಲಲೇಬೇಕೆಂಬ ಹಠ ಹುಟ್ಟಿತು. ಆ ನಂತರ ದಕ್ಷಿಣ ಬಾರತದ ಹಲವು ನಗರಗಳನ್ನು, ಸಣ್ಣ ಊರುಗಳನ್ನು ಸುತ್ತಿ ಅಂತಹ ಹೆಣ್ಣು ಮಕ್ಕಳನ್ನು ಹರಸಾಹಸಪಟ್ಟು ಹುಡುಕಿ,ಬೇಟಿಯಾಗಿ, ನನ್ನ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ, ಅವರ ಬಾಯಿಂದಲೇ ಅವರ ಜೀವನದ ಬಗ್ಗೆ ಕೇಳುತ್ತ ಹೋದೆ.
ಇಲ್ಲ ನನ್ನ ಉದ್ದೇಶವಿದ್ದುದು ಅವರು ಲೈಂಗಿಕ ಕಾರ್ಯಕರ್ತರಾಗಿ ಹೇಗೆ ಬದುಕಿದರು ಎನ್ನುವ ರೋಚಕತೆಯ ಬಗ್ಗೆ ಬರೆಯುವುದಲ್ಲ. ಬದಲಿಗೆ ಎಲ್ಲರಂತೆ ನೆಮ್ಮದಿಯಾಗಿ ಬದುಕು ಕಟ್ಟಿಕೊಂಡು ಜೀವಿಸ ಬೇಕಿದ್ದ ಅವರುಗಳು ಅದು ಹೇಗೆ ವೇಶ್ಯಾವಾಟಿಕೆಯಕೂಪದಲ್ಲಿ ಬಿದ್ದರುಎಂಬುದರ ಬಗ್ಗೆ ಮಾತ್ರ.ಹಾಗಾಗಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಬಂದ ಹಲವು ಪುಸ್ತಕಗಳಲ್ಲಿ ಕಂಡು ಬರುವ ರೋಚಕತೆಯಾಗಲಿ-ಕಾಮೋದ್ರೇಕಗೊಳಿಸುವ ಸನ್ನಿವೇಶಗಳಾಗಲಿ ಈಕತೆಗಳಲ್ಲಿ ಎಲ್ಲಿಯೂ ನಿಮಗೆ ಸಿಗುವುದಿಲ್ಲ. ಇಲ್ಲಿರುವುದು ತಮ್ಮ ಕಡುಬಡತನದಿಂದ, ಹಸಿವಿನಿಂದ, ಅಸಹಾಯಕತೆಯಿಂದ,ಕೆಲವು ಸ್ವಯಂಕೃತಾಪರಾಧಗಳಿಂದ ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾದ ಅವರುಗಳ ಬದುಕಿನ ತಿರುವುಗಳ ಚಿತ್ರಣ ಮಾತ್ರ.
ಅವರುಗಳು ಏನನ್ನು ಹೇಳಿದರೋ ಅಷ್ಟನ್ನು ಮಾತ್ರ ನಾನು ಇಲ್ಲಿ ಅಕ್ಷರ ರೂಪಕ್ಕಿಳಿಸಿದ್ದೇನೆಯೇ ಹೊರತು ಏನನ್ನೂ ಸೇರಿಸಿಲ್ಲ.ನನ್ನಿಂದ ಲೋಪವಾಗಿದ್ದರೆ ಅದು ಭಾಷೆಯ ವಿಷಯದಲ್ಲಿ ಮಾತ್ರ.ವಿವಿಧ ಪ್ರದೇಶಗಳಿಂದ ಬಂದ ಅವರುಗಳು ಮಾತನಾಡಿದ್ದು ಬೇರೆ ಬೇರೆ ಭಾಷೆಯಲ್ಲಿ. ಆದರೆ ಓದುಗರಿಗೆ ಅನುಕೂಲವಾಗುವಂತೆ ನಮ್ಮ ಕಡೆಯ ಜನಸಾಮಾನ್ಯರು ಬಳಸುವ ಆಡು ಬಾಷೆಯನ್ನೇ ಇಲ್ಲಿ ಎಲ್ಲಾ ಕತೆಗಳಲ್ಲಿ ಬಳಸಿದ್ದೇನೆ.
ಈ ಕತೆಗಳನ್ನು ಓದಿದ ನಂತರವಾದರೂ ನಿಮ್ಮಲ್ಲಿ ಅಂತಹ ಹೆಣ್ಣು ಮಕ್ಕಳ ಬದುಕಿನ ಬಗ್ಗೆಒಂದಿಷ್ಟು ಸಹಾನುಭೂತಿ, ಪ್ರೇಮ ಮೊಳೆತರೆ ನನ್ನ ಶ್ರಮ ಸಾರ್ಥಕವದೀತೆಂದು ನಾನು ನಂಬಿದ್ದೇನೆ.
ಕಥೆ-ಎರಡು
ಗಂಡಸಿನ ಬಾರ ತಡೆಯುವ ಶಕ್ತಿ ಇರುವವರೆಗೂ!
ಹೆಣ್ಣುಮಕ್ಕಳ ಸಂತಾನವೇ ಹೆಚ್ಚಾಗಿದ್ದ ಮನೆಯದು. ನಮ್ಮಪ್ಪನಿಗೆ ಮೂರು ಜನ ಅಕ್ಕತಂಗಿಯರು. ಅದರಲ್ಲಿಅಕ್ಕನಿಗೆ ಮದುವೆಯಾಗಿ ಸುಖವಾಗಿದ್ದರೆ,ಇನ್ನಿಬ್ಬರದು ಗೋಳಿನ ಕತೆ. ಮೊದಲ ತಂಗಿ ಅಂದರೆ ನನ್ನಎರಡನೆ ಅತ್ತೆ ಮದುವೆಯಾದ ಮೂರೇ ವರ್ಷಕ್ಕೆ ಗಂಡ ಸತ್ತು ತವರುಮನೆ ಸೇರಿಕೊಂಡು ನಮ್ಮಜೊತೇಲೆ ಇದ್ದಳು.ಇನ್ನು ಎರಡನೆಯವಳೊ ಕುರುಡಿ,ಮದುವೆಯಿರದೆ ತಂದೆ ಮನೇಲೆಇದ್ದಳು. ಇದರ ಜೊತೆಗೆ ನಮ್ಮ ಅಪ್ಪ ಅಮ್ಮನಿಗೆನಾವು ಐದು ಜನ ಹೆಣ್ಣುಮಕ್ಕಳು.ಅದೇನು ದಡ್ಡತನವೊ,ಮೂಡನಂಬಿಕೆಯೊ ಗಂಡಾಗುತ್ತೆಅಂತ ಕಾಯುತ್ತಲೇ ಅಮ್ಮ ಐದು ಹೆಣ್ಣು ಮಕ್ಕಳಿಗೆಜನ್ಮಕೊಟ್ಟು ಸತ್ತುಹೋಗಿದ್ದಳು.. ಮತ್ತೆ ನಾವೇನು ಶ್ರೀಮಂತಿಕೆ ಇದ್ದವರೂ ಅಲ್ಲ. ತಾತ ಮಾಡಿಟ್ಟಿದ್ದ ಎರಡು ಏಕರೆ ಹೊಲ ಮತ್ತು ಕರಿಹೆಂಚಿನ ಹಳೆ ಮನೆ ಬಿಟ್ಟರೆ ಬೇರೇನು ಇರಲಿಲ್ಲ. ನೀರಾವರಿ ಸೌಲಭ್ಯವಿರದೆ ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡಬೇಕಿತ್ತು. ನಾನೇ ಹಿರಿಯ ಮಗಳಾಗಿದ್ದೆ. ಹುಟ್ಟಿದೆರಡು ವರ್ಷ ಚೆನ್ನಾಗಿನಡೆದುಕೊಂಡು ಒಡಾಡ್ತಿದ್ದೆನಂತೆ. ಆದರೆಆಗ ಬಂದ ಜ್ವರ ಇಳಿಯೊವಷ್ಟರಲ್ಲಿ ನನ್ನ ಎಡಗಾಲಿಗೆ ಪೊಲಿಯೊ ಆಗಿಹೋಯಿತು. ನಡೆಯೋವಾಗ ಎಡಗಾಲು ಎಳೆದು ಕೊಂಡೆ ನಡೆಯಬೇಕಾಗಿತ್ತು. ಕೆಲಸಬೊಗಸೆಗೆ ಅದೇನು ಅಡ್ಡಿಯಾಗಿರಲಿಲ್ಲ. ಮಾಮೂಲಿ ಬೇರೆ ಹೆಣ್ಣುಮಕ್ಕಳ ತರಾನೆ ಇರ್ತಿದ್ದೆ. ನೋಡೋಕೆ ಕೆಂಪಗೆಗುಂಡುಗುಂಡಾಗಿಲಕ್ಷಣವಾಗಿದ್ದೆ.ಆದರೆ ನಡೆಯುವಾಗ ಮಾತ್ರ ಕಾಲನ್ನು ಎಳೆದೆ ನಡೀಬೇಕಿತ್ತು. ಅದ್ಯಾಕೊ ಏನೊ ಪೊಲಿಯೊ ಆದ ಮಗು ಅಂತಾನೊ ಏನೋ ನನ್ನ ಸ್ಕೂಲಿಗೆ ಕಳಿಸಲೇ ಇಲ್ಲ. ಮನೇಲೇ ಕೂಡಿಹಾಕಿಯೇ ಸಾಕಿದ್ರು. ಅಮ್ಮ ಇಲ್ಲದ ಮನೆಯನ್ನು ಅತ್ತೆಯಂದಿರೇ ನೋಡಿಕೊಳ್ತಿದ್ದರು. ಹೊಲದ ದುಡಿಮೇಲಿಬರೋ ಆದಾಯ ಅಷ್ಟು ಜನರ ಸಂಸಾರಕ್ಕೆ ಸಾಕಾಗ್ತಇರಲಿಲ್ಲ.
ನನಗೆ ಹದಿನಾಲ್ಕು ವರ್ಷವಾದಾಗ ಮೈನೆರೆದು ದೊಡ್ಡವಳಾದೆ. ನಾನಾದ ಮೂರೇ ತಿಂಗಳಿಗೆ ನನ್ನ ತಂಗೀನೂ ಮೂಲೇಲಿ ಕೂತಳು. ಅಲ್ಲಿಂದ ಅಪ್ಪನ ಕಟಿಪಿಟಿ, ಗೊಣಗಾಟ ಜಾಸ್ತಿಯಾಗ ತೊಡಗಿತು. ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಮದುವೆ ಮಾಡುವ ತನಕ ಅಪ್ಪನಿಗೆ ಸಮಾದಾನವಿರಲ್ಲ. ನಾನುದೊಡ್ಡವಳಾದ ಮಾರನೇ ದಿನದಿಂದಲೇ ಗಂಡಿನ ಹುಡುಕಾಟ ಶುರುವಾಯಿತು. ಬರ್ತಿದ್ದ ಗಂಡುಗಳು ಸಹ ನಮ್ಮ ಯೋಗ್ಯತೆಗೆ ತಕ್ಕನವೇ ಆಗಿದ್ದವು. ಹೊಲದಲ್ಲಿ ಕೂಲಿ ಮಾಡೋರು, ಪೇಟೆಯ ಫ್ಯಾಕ್ಟರಿಯಲ್ಲಿ ದಿನಗೂಲಿ ಮಾಡೋವರು, ಗಾರೆ ಕೆಲಸ ಮಡೋವರು, ತರಕಾರಿ ಮಾರೋವರು ಹೀಗೆ ಅವತ್ತಿನದು ಅವತ್ತಿಗೆದುಡಿದು ತಿನ್ನುವಂತವರೇ ಎಲ್ಲ.ಬಡತನ ಇದ್ದರೂ ಅಪ್ಪನಿಗೆ ಸ್ವಲ್ಪವಾದರುಆಸ್ತಿ ಇರೋವರಿಗೆ ಮಕ್ಕಳನ್ನುಕೊಡಬೇಕು ಅನ್ನೋದುಅಪ್ಪನ ಆಸೆಯಾಗಿತ್ತು. ಹಾಗಾಗಿ ನಾನು ಹದಿನೆಂಟಕ್ಕೆ ಕಾಲಿಟ್ಟರೂ ಮದುವೆಯಾಗಲಿಲ್ಲ. ಇಷ್ಟಲ್ಲದೆ ಬಂದ ಗಂಡುಗಳೊ ನಾನು ಕುಂಟಿ ಅಂತ ಬೇಡ ಅನ್ನುತಿದ್ದರು. ಒಂದಿಬ್ಬರು ನನ್ನ ತಂಗಿಯನ್ನು ಕೊಡೊದಾದರೆ ಆಗ್ತೀವಿ ಅಂತಾನ ನೇರವಾಗೇ ಹೇಳಿದ್ರು. ಅಕ್ಕನ್ನು ಇಟ್ಟುಕೊಂಡು ತಂಗಿಗೆ ಮದುವೆ ಮಾಡಲ್ಲ ಅನ್ನೋದು ಅಪ್ಪನ ಹಟ. ಕೊನೆಗೆ ನಾನೆಅತ್ತು ಕರೆದು ಮೊದಲು ಅವಳಿಗೆ ಮಾಡಿ, ನನಗೆ ಗಂಡು ಸಿಕ್ಕಾಗ ಆಗ್ತೀನಿ ಅಂತಬಲವಂತಮಾಡಿದಾಗ ಅಪ್ಪ ಒಪ್ಪಿದರು ಅಗ ಪಕ್ಕದೂರಲ್ಲಿಫ್ಲೋರ್ ಮಿಲ್ಲೊಂದರಲ್ಲಿಕೆಲಸ ಮಾಡ್ತಿದ್ದವನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡಿದ್ದಾಯಾಯಿತು. ಮತ್ತೆ ನನಗೆ ಗಂಡಿನ ಹುಡುಕಾಟ ಶುರುವಾಯಿತು. ಅದೇ ಸಮಯಕ್ಕೆ ನನ್ನ ಇನ್ನಿಬ್ಬರು ತಂಗಿಯರು ಸಹ ವಯಸ್ಸಿಗೆ ಬಂದು ನಿಂತರು.
ನನ್ನ ನೋಡೋಕೆ ಬಂದ ಗಂಡುಗಳ ಎದುರು ನನ್ನತಂಗಿಯರು ಬರದೇ ಇರುವಂತೆ ನೋಡಿಕೊಳ್ಳೊ ಹೊಸಕೆಲಸವೊಂದು ಅತ್ತೆಯಂದಿರ ಹೆಗಲಿಗೇರಿತು.ಮತ್ತೆ ಒಂದು ವರ್ಷ ಕಳೆದುಹೋಯಿತು. ಆಗಲೆದೂರದ ನಗರದಿಂದ ಒಂದು ಸಂಬಂದ ಬಂತು. ಈ ಸಾರಿ ದೇವರು ಕಣ್ಣು ಬಿಟ್ಟಿದ್ದ.ಬಂದ ಗಂಡು ನನ್ನ ನೋಡಿದೊಡನೆ ಒಪ್ಪಿಕೊಂಡಿದ್ದ. ಅವನು ಒಪ್ಪಿಕೊಂಡ ಮೂರೇ ವಾರಕ್ಕೆ ಮದುವೇನು ಮುಗಿದು ಹೋಯಿತು. ಮದುವೆ ಮುಗಿಸಿ ನಗರದಲ್ಲಿದ್ದ ಅವನ ಮನೆಗೆ ಕರೆದುಕೊಂಡು ಹೋದ. ತುಂಬಾ ಬಡವರೇ ಇದ್ದ ಏರಿಯಾ ಅದು. ಕೆಂಪು ಹೆಂಚಿನ ಸಣ್ಣ ಮನೆ. ಅವನು ಯಾವುದೊ ಹೋಲ್ ಸೆಲ್ಅಂಗಡೀಲಿಕೆಲಸ ಮಾಡ್ತಿದ್ದನಂತೆ. ಅವನ ಅಪ್ಪ ಅಮ್ಮ ಹಳ್ಳಿಯಲ್ಲಿ ಇದ್ದುದರಿಂದಮನೇಲಿ ನಾವಿಬ್ಬರೇ ಇರಬೇಕಾಗಿತ್ತು. ನನ್ನ ಬಿಟ್ಟು ಹೋಗೋಕೆ ಬಂದ ಅಪ್ಪನಿಗೆ ತುಂಬಾಖುಶಿಯಾಗಿತ್ತು. ಮದುವೆಯಾದ ಮೊದಲ ಒಂದಷ್ಟು ತಿಂಗಳು ಜೀವನ ತುಂಬಾ ಚೆನ್ನಾಗಿತ್ತು. ನನ್ನಚೆನ್ನಾಗಿಯೇನೋಡಿಕೊಳ್ಳೋನು ಅದೇನೊ ನಿದಾನವಾಗಿ ಅವನಿಗೆ ನನ್ನ ಮೇಲೆ ಆಸಕ್ತಿ ಕಡಿಮೆಯಾಗ್ತಾ ಹೋಯಿತು.ತಡವಾಗಿ ಮನಗೆ ಬರೋದು,ಬರುವಾಗ ಕುಡಿದು ಬರೋದು ಮಾಡ ತೊಡಗಿದ. ಏನಾದರು ಕೇಳಿದರೆ ದನಕ್ಕೆಹೊಡೆದ ಹಾಗೆ ಹೊಡೆಯೋನು. ಹೀಗೆನಡೀತಾ ನಡೀತಾ ಆರು ತಿಂಗಳುಗಳು ಕಳೆದುಹೋದವು. ಆಮೇಲವನುಒಂದುದಿನ ಮನೆಗೆ ಬರೋದನ್ನೇ ನಿಲ್ಲಿಸಿಬಿಟ್ಟ. ನನಗೆ ದಿಕ್ಕೇ ತೋಚದಂತಾಯಿತು. ಅವನ ಜೊತೆ ಆಗಾಗ ಮನೆಗೆ ಬರ್ತಿದ್ದ ಅವನ ಪ್ರೆಂಡ್ ಒಬ್ಬನ ಪರಿಚಯ ನನಗಾಗಿತ್ತು. ಸರಿ ಅಂತ ಅವನನ್ನು ಹುಡುಕಿಕೊಂಡು ಹೋಗಿ ವಿಚಾರಿಸಿದೆ. ಅವನಿಗೆಮದುವೆಯಾಗಿರಲಿಲ್ಲ. ಅದೇ ಊರಲ್ಲಿ ಅವರ ಅಪ್ಪ ಅಮ್ಮನ ಜೊತೆ ವಾಸವಾಗಿದ್ದ. ಅವನು ಹೇಳಿದ್ದು ಕೇಳಿ ನನಗೆ ಸಿಡಿಲುಬಡಿದಂತಾಗಿ ಹೋಯಿತು.ನಿನ್ನ ಗಂಡನಿಗೆ ಈಗಾಲೇ ಒಂದು ಮದುವೆಯಾಗಿ ಪಕ್ಕದೂರಲ್ಲಿಮನೆ ಮಾಡಿ ಇಟ್ಟಿದಾನೆ. ಈಗ ಅವಳಿಗೆ ಅವನು ನಿನ್ನ ಮದುವೆಯಾಗಿರೋದು ಗೊತ್ತಾಗಿದ್ದರಿಂದ ಇಲ್ಲಿಅವನ ಕೆಲಸ ಬಿಡಿಸಿ ಅಲ್ಲಿಯೇಅವನನ್ನು ಇರಿಸಿಕೊಂಡಿದ್ದಾಳೆ.ನೀನುಸುಮ್ಮನೆ ಊರಿಗೆ ಹೊಗಿ ನಿಮ್ಮ ಅಪ್ಪನನ್ನು ಕರೆದುಕೊಂಡು ಬಂದು ವಿಚಾರಿಸು ಅಂದ. ಯಾಕೊ ನನಗೆ ಈಗಲೆ ಅವರಿಗೆ ವಿಚಾರ ತಿಳಿಸೋದು ಬೇಡ ಅನ್ನಿಸಿ,ಅವನಿಗೆನನ್ನ ಜೊತೆ ನೀವು ಬರ್ತೀರಾ ನಾವೇ ಹೋಗಿ ಅವರನ್ನು ನೋಡಿ ಏನು ಅಂತ ವಿಚಾರಿಸಿ ಮಾತಾಡಿಸಿ ಬರೋನ ಅಂದೆ.ಅದಕ್ಕವನು ಅವನೀಗ ನನ್ನ ಜೊತೆ ದುಡ್ಡಿನ ವಿಚಾರದಲ್ಲಿಜಗಳ ಮಾಡಿಕೊಂಡು ಮಾತಾಡಿಸೋದು ಬಿಟ್ಟಿದಾನೆ.ಆದರೂ ನಿನಗೊಸ್ಕರ ಬರ್ತೀನಿ. ಸಾಯಂಕಾಲದ ಹೊತ್ತಿಗೆ ಹೋದರೆ ಮನೇಲೇ ಸಿಗ್ತಾನೆ ಅನಿಸುತ್ತೆ ಅಂದ. ಸರಿಅಂತ ಅವತ್ತುಸಾಯಂಕಾಲಆ ಊರಿಗೆ ಹೊರಟಿವಿ. ಸುಮಾರು ಮುವತ್ತು ಮೈಲಿ ದೂರದ ಪ್ರಯಾಣ.
ಆ ಊರಿಗೆ ತಲುಪಿದಾಗ ಸಂಜೆ ಕತ್ತಲಾಗ್ತಿತ್ತು. ಅವನು ಅವನ ಹೆಂಡತಿ ಮನೇಲೆ ಇದ್ರು.ನಮ್ಮನ್ನು ಒಳಗೆಬಿಟ್ಟುಕೊಳ್ಳದೆ ನನಗು ನಿನಗು ಯಾವ ಸಂಬಂದಾನು ಇಲ್ಲ ಹೊರಟುಹೋಗುಅಂತೆಲ್ಲಾ ಕೂಗಾಡಿದ.ಅವನ ಹೆಂಡತಿ ಅನಿಸಿಕೊಂಡವಳು ನಾನು ಮದುವೆಯಾದಹೆಂಡತಿ. ಇಷ್ಟು ದಿನ ನಿನ್ನ ಇಟ್ಟುಕೊಂಡಿದ್ದಅಂತ ಮನೆ ಹತ್ತಿರ ಬಂದು ಅವನನ್ನು ನನ್ನೆದುರೇ ಕರೀತೀಯಾಅಂತೇಲಿ ನನ್ನಕಪಾಳಕ್ಕೆ ಹೊಡೆದು ಗಲಾಟೆ ಮಾಡಿದಳು. ಅಲ್ಲಿ ಸುತ್ತ ಮುತ್ತಲಿನ ಜನರೆಲ್ಲ ಅವರಪರವಾಗಿ ಮಾತಾಡಿದ್ದರಿಂದ ನಾವು ಬರಿಗೈಲಿ ವಾಪಾಸಾಗ ಬೇಕಾಯಿತು. ಬಸ್ ಸ್ಟ್ಯಾಂಡಿಗೆ ಬಂದರೆಊರಿಗೆ ಹೊಗಲು ಬಸ್ಸು ಇರಲಿಲ್ಲ. ಇನ್ನೇನು ಮಾಡುವುದು ಅಂತ ಅಲ್ಲೇ ಕೂತೆವು. ಕೊನೆಗೆಅವನ ಫ್ರೆಂಡ್ ಇವತ್ತು ರಾತ್ರಿ ಹೋಟೆಲ್ಲಿನಲ್ಲಿರೂಂ ಮಾಡಿ ಇರೋಣ.ಬೆಳಿಗ್ಗೆ ಬೇಗ ಎದ್ದು ನೀನು ಇಲ್ಲಿಂದಲೆ ನಿಮ್ಮ ಹಳ್ಳಿಗೆ ಹೋಗಿ ಅಪ್ಪ ಅಮ್ಮನ್ನು ಕರೆದುಕೊಮಡು ಬಾ ನಾನು ನಮ್ಮೂರಿಗೆ ಹೋಗ್ತೀನಿಅಂದ. ನನಗೆ ಬೇರೇನು ದಾರಿಯಿರಲಿಲ್ಲ. ಹೂ ಅಂದೆ.ಸರಿ ಅಂತ ಬಸ್ ಸ್ಟ್ಯಾಂಡ್ ಹತ್ತಿರದಲ್ಲಿಯೇ ಇದ್ದ ಲಾಡ್ಜ್ ಒಂದರಲ್ಲಿರೂಂ ಮಾಡಿದಿವಿ. ಅವನು ಮಂಚದ ಮೇಲೆ ಮಲಗಿದ್ದ ನಾನು ಕೆಳಗೆ ಮಲಗಿದ್ದೆ. ಇನ್ನೇನು ನಿದ್ದೆ ಹತ್ತಬೇಕು ಅನ್ನುವಷ್ಟರಲ್ಲಿ ನನ್ನಪಕ್ಕ ಬಂದು ನನ್ನ ಗಟ್ಟಿಯಾಗಿತಬ್ಬಿಕೊಂಡುಎದೆಗಳಿಗೆ ಕೈ ಹಾಕಿದ. ನಾನು ಬೇಡ ಅಂತ ಕೊಸರಾಡತೊಡಗಿದೆ. ಅವನುನೋಡಿದ್ಯಲ್ಲ ನಿನ್ನ ಗಂಡ ಹೆಂಗೆ ಇನ್ನೊಬ್ಬಳ ಜೊತೆ ಆರಾಮಾಗಿದಾನೆ. ಅವನೇ ಹಾಗಿರಬೇಕಾದರೆ ನೀನ್ಯಾಕೆ ಒಬ್ಬಳೇ ಅಳ್ತಿರಬೇಕು,ನಿನಗೇನುಕಡಿಮೆ ಅಂತೆಲ್ಲಹೇಳಿ ನನ್ನತುಂಬಾ ಬಲವಂತ ಮಾಡಿದ.ಕೊನೆಗೆ ಅವನು ನಾನು ನಿನ್ನ ಮದುವೆಯಾಗ್ತೀನಿ,ಈಗಲಾದರು ಒಪ್ಪಿಕೊಅಂತ ಆಸೆ ತೋರಿಸಿದ. ಹೀಗೆ ನನ್ನ ಬಿಟ್ಟೂ ಬಿಡದೆ ಕಾಡಿ ಕಾಡಿ ಮದ್ಯರಾತ್ರಿಯಹೊತ್ತಿಗೆ ನನ್ನ ಅನುಭವಿಸಿಬಿಟ್ಟಿದ್ದ. ನನ್ನ ಗಂಡನಾದವನ ಮೇಲಿನಕೊಪಕ್ಕೊ ಏನೊ ನಾನೂ ಕರಗಿ ಬಿಟ್ಟಿದ್ದೆ. ಎಲ್ಲ ಮುಗಿದ ಮೇಲೆ ನಿಜವಾಗಿಯೂ ನನ್ನ ಮದುವೆಯಾಗ್ತೀಯಾಅಂತ ಕೇಳಿದೆ ಅದಕ್ಕವನು ನಿಜವಾಗಿ ಆಗ್ತೀನಿ ಅಂದ.ಬೆಳಿಗ್ಗೆ ಎದ್ದು ನಾನು ಅಲ್ಲಿಂದಲೇ ಹಳ್ಳಿಗೆ ಹೋದೆ. ವಿಷಯ ಕೇಳಿದ ಅಪ್ಪ ನನ್ನ ಜೊತೆನಗರಕ್ಕೆ ಬಂದು ನನ್ನ ಮನೇಲಿಇರೊಕೆ ಹೇಳಿ ನನ್ನ ಗಂಡ ಮತ್ತು ಅವಳು ಇದ್ದ ಊರಿನ ಮನೆಯ ಅಡ್ರೆಸ್ ತಗೊಂಡು ಹೋದ. ಅವನು ಅಲ್ಲಿ ಹೋಗಿಏನು ಮಾತಾಡಿದನೊ ಬಿಟ್ಟನೊ ಏನೊ ನನಗೆ ಗೊತ್ತಾಗಲೇ ಇಲ್ಲ ಯಾಕೆಂದರೆ ಅಲ್ಲಿಗೆ ಹೋದ ಅಪ್ಪವಾಪಾಸು ನಾನಿದ್ದೂರಿಗೆ ಬರಲೇ ಇಲ್ಲ. ನಾನು ಗಂಡನ ಫ್ರೆಂಡಿನ ಜೊತೆಇದನ್ನೆಲ್ಲ ಹೇಳಿ ನಾನು ಹಳ್ಳಿಗೆ ಹೋಗಿ ಬರ್ತೀನಿ. ನೀನುಜೊತೆಗೆ ಬಾ ಅಂತ ಕರೆದೆ.ಅದಕ್ಕವನುಇಲ್ಲನೀನೊಬ್ಬಳೇ ಹೋಗಿಬಾ. ನಾನು ಕಾಯ್ತಾ ಇರ್ತೀನಿಅಂದ.
ಅವತ್ತೇ ಮದ್ಯಾಹ್ನದ ಹೊತ್ತಿಗೆ ನಾನು ಹಳ್ಳಿಗೆ ಹೊದೆ.ಅಲ್ಲಿನೋಡಿದರೆ ಅಪ್ಪ ಕೈ ಮುರಿದುಕೊಂಡು ಮಲಗಿದ್ದಾನೆ. ವಿಷಯ ಏನು ಅಂದರೆ ನನ್ನಗಂಡನಿಗೆ ಜೋರು ಮಾಡಿ ಕೇಳಿದಾಗ ಅವನು ತಳ್ಳಿದ ರಭಸಕ್ಕೆ ಬಿದ್ದ ಅಪ್ಪನ ಎಡಗೈ ಮುರಿದು ಹೋಗಿದೆ.ಕೊನೆಗೆ ಯಾರೊಪುಣ್ಯಾತ್ಮರುಅವನನ್ನುಎತ್ತಿಬಸ್ ಹತ್ತಿಸಿ ವಾಪಾಸು ಹಳ್ಳಿಗೆ ಕಳಿಸಿದ್ದರು. ಮನೆಯಲ್ಲಿಎಲ್ಲರಿಗೂ ಅಳುವುದರ ಹೊರತಾಗಿ ಬೇರೆ ದಾರಿಇರಲಿಲ್ಲ. ಸರಿ ನನಗು ಅಲ್ಲಿದ್ದು ಏನು ಮಾಡೋದು ಅಂತ ಗೊತ್ತಾಗದೆ ವಾಪಾಸು ನಗರಕ್ಕೆಬಂದು ಬಿಟ್ಟೆ.ಮನೆಯಲ್ಲೂಯಾರೂ ಈಗೇನು ಮಾಡ್ತೀಯಾ ಎಲ್ಲಿಗೆ ಹೋಗ್ತೀಯಾ ಅಂತ ಕೇಳಲಿಲ್ಲ. ನಗರಕ್ಕೆ ಬಂದರೆ ಇನ್ನೊಂದು ಸುದ್ದಿ ನನಗೆ ಕಾಯ್ತಿತ್ತು ನಾನಿದ್ದ ಬಾಡಿಗೆ ಮನೆಉ ಓನರ್ ಬಂದುನಿನ್ನ ಗಂಡ ಅಡ್ವಾನ್ಸ್ ವಾಪಾಸುಇಸ್ಕೊಂಡು ಹೋಗಿದಾನೆ.ಇನ್ನು ಮೂರುದಿನಕ್ಕೆ ಅಗ್ರಿಮೆಂಟ್ ಮುಗಿಯುತ್ತೆ ,ತಕ್ಷಣ ಮನೆಖಾಲಿಮಾಡು ಅಂದ. ನನಗೇನು ಮಾಡಲುತಿಳಿಯಲಿಲ್ಲ.ಮತ್ತೆ ಗಂಡನಪ್ರೆಂಡ್ ಬೇಟಿಯಾಗಿವಿಷಯ ತಿಳಿಸಿದೆ.ಅದಕ್ಕವನು ಇಲ್ಲಿದ್ದರೆ ನಾವುಮದುವೆಯಾಗೋಕೆಆಗಲ್ಲ.ಬೆಂಗಳೂರಿಗೆ ಹೋಗಿಬಿಡೋಣ. ಅಲ್ಲೇಮದುವೆಯಾಗಿ ಜೀವನ ಮಾಡೋಣ ಅಂದ. ಮುಳುಗುತ್ತಿದ್ದವಳಿಗೆಆಸರೆ ಸಿಕ್ಕಂತಾಗಿ ನಾನು ಹಿಂದೆ ಮುಂದೆಯೋಚಿಸದೆ ಒಪ್ಪಿಬಿಟ್ಟೆ. ಸರಿ ಅವತ್ತೇರಾತ್ರಿಇದ್ದ ಒಂದಷ್ಟುಬಟ್ಟೆ ಬರೆ ತುಂಬಿಕೊಂಡು ಬೆಂಗಳೂರಿಗೆ ಹೋದಿವಿ.ಒಂದುಸಣ್ಣ ಮನೆ ಮಾಡಿಇರೊಕೆ ತೊಡಗಿದಿವಿ.ಮನೆ ಓನರಿಗೆ ಗಂಡಹೆಂಡತಿ ಅಂತ ಹೇಳಿಕೊಂಡಿದ್ವಿ. ಅವನು ಒಂದಷ್ಟುದುಡ್ಡು ತಂದಿದ್ದ ನನ್ನಹತ್ತಿರಾನು ಒಂದಷ್ಟು ದುಡ್ಡು ಇತ್ತು.ಮನೆಗೆ ಬೇಕಾದ ಪಾತ್ರೆಪಡಗ ತಂದುಕೊಂಡು ಸಂಸಾರ ಶುರು ಮಾಡಿದ್ವಿ. ಸರಿಈಗ ನನ್ನ ಮದುವೆಯಾಗು ಅಂತ ಅವನಿಗೆ ಕೇಳತೊಡಗಿದೆ. ಮದುವೆಯಾಗದೆ ಇದ್ರೆ ಏನಾಗುತ್ತೆ.ಈಗೇನು ನಾವುಗಂಡ ಹೆಂಡತಿ ತರಾ ಇಲ್ವಾ ಅಂದ. ನನಗೆಸಿಟ್ಟುಬಂದುಜಗಳ ಮಾಡಿದೆ. ಹೀಗೆಇದೇ ವಿಷಯವಾಗಿ ದಿನಾಜಗಳ ಮಾಡಿಕೊಳ್ಲತೊಡಗಿದಿವಿ. ಎರಡು ತಿಂಗಳು ಕಳೆಯಿತು.
ಒಂದು ದಿನ ಮನೆಯಿಂದ ಹೊರಗೆ ಹೋಗಿಬರ್ತೀನಿ ಅಂದವನು ವಾಪಾಸು ಮನೆಗೆ ಬರಲೇ ಇಲ್ಲ. ಗೊತ್ತಿರದ ಊರಲ್ಲಿಅವನನ್ನು ಎಲ್ಲಿ ಅಂತ ಹುಡುಕೋದು? ವಾಪಾಸು ಊರಿಗೆ ಹೋಗೋಕೂ ಧೈರ್ಯ ಸಾಲಲಿಲ್ಲ. ಮನೆ ಓನರ್ ಬೇರೆ ಯಾವುದೊ ಏರಿಯಾದಲ್ಲಿದ್ದ. ಅಕ್ಕಪಕ್ಕದವರ ಪರಿಚಯಾನುಇರಲಿಲ್ಲ.ಸರಿ ಅಂತ ಯಾಯರ್ಾರನ್ನೊಕೇಳಿಕೊಂಡು ಹತ್ತಿರದಲ್ಲಿದ್ದ ಪೋಲೀಸ್ ಸ್ಟೇಷನ್ನಿಗೆ ಹೋದೆ. ಅಲ್ಲಿದ್ದ ಪೋಲೀಸಿನವರುನನ್ನೆಲ್ಲ ಪೂವರ್ಾಪರ ವಿಚಾರಿಸೋಕೆ ಶುರು ಮಾಡಿದರು. ನಾನು ನಡೆದ ಅಷ್ಟೂ ವಿಚಾರವನ್ನು ಹೇಳಿಬಿಟ್ಟೆ. ನಾನು ಮದುವೆಯಾದವನ ಬಿಟ್ಟು ಬೇರೆಯವನ ಜೊತೆ ಬಂದವಲು ಅಂತ ಗೊತ್ತಾಗ್ತಿದ್ದ ಹಾಗೆ ಅಲ್ಲಿದ್ದ ಇಬ್ಬರು ಪೋಲೀಸರವರಸೆಯೇ ಬದಲಾಗಿಬಿಡ್ತು. ಸುಮ್ನೆಊರಿಗೆಹೋಗುಅಂದರು. ನಾನುನನ್ನ ಹತ್ತಿರ ದುಡ್ಡಿಲ್ಲಜೊತೆಗೆ ಮನೆಗೆ ಹೋದರೆ ನನ್ನ ಸೇರಿಸಲ್ಲ ಅಂತ ಅತ್ತೆ.ಹಾಗಾದರೆ ನಿನ್ನ ಬಿಟ್ಟು ಓಡಿಹೋದನಲ್ಲ ಅವನದೊಂದು ಪೋಟೋನಾದರುತಗೊಂಡು ಬಾ ಅಂದರು. ನನ್ನ ಹತ್ತಿರ ಪೋಟೋ ಎಲ್ಲಿಂದ ಬರಬೇಕು. ಅಷ್ಟೆಲ್ಲ ಕತೆ ಕೇಳಿದ ಪೋಲೀಸಿನೋರು ನಾಳೆ ಬಾ ನೋಡೋಣ ಅಂತ ಹೇಳಿ ವಾಪಾಸು ಕಳಿಸಿದರು. ತಿರುಗಿ ಮನೆಗೆ ಬಂದೋಳು ಹೇಗೊ ಮಾಡಿ ಮನೆ ಓನರ್ ಅಡ್ರೆಸ್ ಹುಡುಕಿಕೊಂಡುಹೋದೆ.ವಿಷಯ ಕೇಳಿದ ಅವನು ಈಗಲೆಮನೆಖಾಲಿ ಮಾಡಿ ಹೋಗು ನಿಮ್ಮಂತವರ ಸಹವಾಸವೇ ಬೇಡ ಅಂತ ಕೂಗಾಡಿದ. ಇವತ್ತಲ್ಲ ನಾಳೆ ಅವನು ವಾಪಾಸು ಬರ್ತಾನೆ ನಾನಿಲಿದ್ದು ಕಾಯ್ತೀನಿಅಂತ ಎಷ್ಟೇ ಕೇಳಿಕೊಂಡ್ರು ಅವನ ಮನಸ್ಸುಕರಗಲಿಲ್ಲ. ಜೊತೇಲಿದ್ದ ಅವನ ಹೆಂಡತಿನೀವು ಈಗಲೆ ಇವಳಜೊತೆ ಹೋಗಿ ಮನೆ ಖಾಲಿ ಮಾಡಿಸಿ ಅವಳ ಸಾಮಾನು ಹೊರಗೆ ಹಾಕಿ ಬನ್ರಿ ಅಂದಳು. ಸರಿ ಅಂತ ಅವನೂ ನನ್ನ ಜೊತೆ ಮನೆಗೆ ಬಂದ. ಅದೊ ಒಂದೇ ರೂಮಿನ ಮನೆ. ಸಾಮಾನಿದ್ದದು ನಾಕು ಜೊತೆ ಬಟ್ಟೆ ಒಂದೆರಡುಅಡುಗೆ ಪಾತ್ರೆ ಚಾಪೆ ಬೆಡ್ ಶೀಟುಗಳು ಮಾತ್ರ.. ನಾನು ಅದನ್ನೆಲ್ಲ ಅಳ್ತಾನೆ ಒಂದುಕಡೆ ಜೋಡಿಸ್ತಿರಬೇಕಾದರೆ ಮನೆ ಓನರ್ ಮುಂದಿನ ಬಾಗಿಲು ಹಾಕಿಬಂದು ನನ್ನ ಬಾಚಿ ತಬ್ಬಿ ಹಿಡಿದುಕೊಂಡುನೀನು ಎಲ್ಲಿಗೂ ಹೋಗೋದು ಬೇಡ.ನಿನ್ನ ಗಂಡಬರೋತನಕ ಈ ಮನೇಲೆ ಇರುವಂತೆ, ಆದರೆ ನಾನು ಹೇಳಿದಂತೆ ಕೇಳಿದರೆ ಸಾಕು ಅಂತ ಬಲವಂತವಾಗಿ ನನ್ನ ಮೇಲೆ ಬಿದ್ದ. ಅವನತೀಟೆ ತೀರಿದಮೇಲೆ ಎದ್ದವನುಇದನ್ನು ಯಾರಿಗೂ ಹೇಳಬೇಡ. ನಿನ್ನನಾನು ನೋಡಿಕೋತಿನಿ.ನಿನಗೇನು ಬೇಕೊ ಅದನ್ನು ನಾನು ಕೊಡ್ತೀನಿ.ಎಲ್ಲಿಗೂಹೋಗಬೇಡ ಅಂತ ಗೋಗರೆದ.ನನ್ನದೊ ಏನು ಮಾಡೋಕಾಗದ ಸ್ಥಿತಿ. ನಂಬಿದ ಇಬ್ಬರುಗಂಡಸರು ನಡುನೀರಲ್ಲಿ ಕೈ ಬಿಟ್ಟು ಹೋಗಿದ್ದರು. ಬಂದಿದ್ದು ಬರಲಿ ಅಂತ ತಲೆಯಾಡಿಸಿ ಬಿಟ್ಟೆ.
ಮಾರನೇ ದಿನದಿಂದ ಅವನು ಮದ್ಯಾಹ್ನದ ಹೊತ್ತಿಗೆ ಬಂದು ಸಂಜೆತನಕ ನನ್ನ ಜೊತೆ ಇದ್ದುಹೋಗತೊಡಗಿದ. ಮನೆಗೆ ಬೇಕಾದ ಸಾಮಾನೆಲ್ಲವನ್ನುತಂದು ಹಾಕಿ ಕೈಗೂ ದುಡ್ಡು ಕೊಡೋನು. ಹೊರಗಡೆ ಕರೆದುಕೊಂಡು ಹೋಗಿಸಿನಿಮಾ ಪಾಕರ್ುತೋರಿಸ್ತಾ ಇದ್ದ. ಒಂದು ಲೆಕ್ಕದಲ್ಲಿ ನಾನವನ ಇಟ್ಟುಕೊಂಡವಳಾಗಿ ಬದುಕೋಕೆ ಶುರು ಮಾಡಿದ್ದೆ. ಹೀಗೆ ಆರು ತಿಂಗಳು ಕಳೆಯಿತು. ಮನೇಲಿ ಅವನು ತನ್ನ ಹೆಂಡತಿಗೆ, ನಾನುನನ್ನ ಗಂಡ ವಾಸ ಮಾಡಿ ಬಾಡಿಗೆ ಕೊಡ್ತಿದ್ದೀವಿ ಅಂತ ಸುಳ್ಳು ಹೇಳಿದ್ದ ಅನಿಸುತ್ತೆ. ಹೀಗೇ ಏಳೆಂಟು ತಿಂಗಳುಗಳು ಕಳೆದವು.ಆಮೇಲೊಂದು ದಿನ ಮದ್ಯಾಹ್ನ ನಾನು ಅವನು ಜೊತೆಗಿರಬೇಕಾದರೆದಿಡೀರನೇ ಅವನ ಹೆಂಡತಿ ಮನೆಗೆ ನುಗ್ಗಿ ನನ್ನ ಸೀರೆ ಎಳೆದಾಡಿ ಚೆನ್ನಾಗಿ ಹೊಡೆದು ಮನೆಯಿಂದ ಹೊರಗೆಹಾಕಿದಳು. ಅವಳ ಗಂಡ ಸುಮ್ನೆತಲೆ ಬಗ್ಗಿಸಿ ನಿಂತಿದ್ದ. ಸಂಜೆ ತನಕ ಅವಳು ಅದೇ ಮನೇಲಿ ಗಂಡನ್ನ ಕೂರಿಸಿಕೊಂಡುಕೂತಿದ್ದಳು. ಸಂಜೆಯಾದರು ನಾನುಸಹ ಹೊರಗೆ ಗೇಟಿನಹತ್ತಿರ ನಿಂತೇ ಇದ್ದೆ.ಸಾಯಂಕಾಲ ಆರು ಗಂಟೆಗೆ ಹೊರಗೆ ಬಂದವಳು ಈಗ ನೀನು ಇಲ್ಲಿಂದ ಹೊಗಿಲ್ಲ ಅಂದ್ರೆರೌಡಿಗಳನ್ನು ಕರೆಸಿಹೊಡೆಸ್ತೀನಿ ಅಂತ ಹೆದರಿಸಿದಳು.ವಿಧಿಯಿಲ್ಲದೆ ನಾನು ಅಲ್ಲಿಂದ ಹೊರಡಬೇಕಾಯಿತು. ಸುಮ್ಮನೆ ರಸ್ತೇಲಿ ಗೊತ್ತುಗುರಿಯಿಲ್ಲದೆನಡೆದುಕೊಂಡುಹೊಗ್ತಿರಬೇಕಾದರೆಹಿಂದಿನಿಂದಯಾರೊಕರೆದಂತಾಯಿತು. ತಿರುಗಿ ನೊಡಿದರೆ ಇಬ್ಬರು ಗಂಡಸರು. ಮನೆ ಹತ್ತಿರದ ಗಲಾಟೆ ನೊಡೀನೆ ನನ್ನ ಹಿಂದೆ ಬಂದಿದ್ದರು. ಅವರಲ್ಲಿ ಒಬ್ಬ ಹತ್ತಿರ ಬಂದು ಈಗ ಎಲ್ಲಿಗೆ ಹೋಗ್ತೀಯಾ ಅಂದ ನಾನು ಮಾತಾಡಲಿಲ್ಲ. ಸುಮ್ನೆನಮ್ಮಜೊತೆ ಬಾ ರಾತ್ರಿಇರೊಕೆಜಾಗನಾದ್ರು ಸಿಗುತ್ತೆ.ಇಲ್ಲಾಂದ್ರೆ ನಾಯಿತರಾ ರಸ್ತೇಲೆ ಬಿದ್ದಿರಬೇಕಾಗುತ್ತೆ ಅಂದ. ಅವನ ಮಾತು ನಿಜ ಆಗಿತ್ತು. ಅವತ್ತು ರಾತ್ರಿ ಹೋಗೊಕೆ ನನಗೆ ನೆಲೆಯೇಇರಲಿಲ್ಲ.ಬೀದೀಲೆ ಇರಬೇಕಾಗಿತ್ತು. ಆದರೆ ಅವನು ಹಾಗೆಕರೆದಿದ್ದರ ಹಿಂದಿದ್ದ ಉದ್ದೇಶ ಗೊತ್ತಾಗಿತ್ತು. ಹೋಗುವುದೊ ಬಿಡುವುದೊ ಆಲೊಚನೆಯಲ್ಲೇಹತ್ತು ನಿಮಿಷ ಕಳೆದು ಹೋಗಿತ್ತು. ನಾವುಇಬ್ಬರಿದಿವಿ ಅಂತೇನು ಹೆದರಬೇಡ. ಅವನುಮನೆಗೆ ಹೋಗ್ತಾನೆ.ನಿನ್ನ ಜೊತೆ ನಾನೊಬ್ಬನೆ ಬರೊದುಅಂದ. ಏನು ಮಾಡಲೂ ತೋಚದೆ ನಾನವನ ಹಿಂದೆ ಹೋದೆ.ಯಾವುದೊ ಹೋಟೆಲ್ಲಿನ ರೂಮಿಗೆ ಕರೆದುಕೊಂಡು ಹೋದ.
ಅವತ್ತುರಾತ್ರಿ ನನ್ನ ಜೀವನದಲ್ಲಿ ನಾಲ್ಕನೇ ಗಂಡಸಿನ ಜೊತೆ ಮಲಗಿದೆ. ಮನಸ್ಸಿಗೆ ಏನೊಕಷ್ಟ ಆಗ್ತಾ ಇತ್ತು.ಆದರೆ ನನ್ನಪರಿಸ್ಥಿತಿಲಿ ಮನಸ್ಸಿನ ಮಾತಿಗೆ ಜಾಗ ಇರಲಿಲ್ಲ. ಬೆಳಿಗ್ಗೆ ಎದ್ದಾಗ ಒಂಭತ್ತು ಗಂಟೆಯಾಗಿತ್ತು. ನನ್ನ ಕೈಗೆ ಒಂದಿಷ್ಟು ದುಡ್ಡು ಕೊಟ್ಟವನುಹೊರಟುನಿಂತ. ಮುಂದೇನು ಅಂತ ಗೊತ್ತಾಗದೆ ನಾನವನ ಮುಖವನ್ನೇ ನೋಡುತ್ತಾ ಈಗ ನಾನೆಲ್ಲಿ ಹೋಗಲಿಅಂದೆ.ಅದಕ್ಕವನು ನನ್ನೇನು ಕೇಳ್ತೀಯಾ? ರಾತ್ರಿ ಜೊತೆ ಮಲಗಿದೆ ದುಡ್ಡು ಕೊಟ್ಟಿದೀನಿ.ಇನ್ನುನಿನಗೆಇಷ್ಟಬಂದ ಹಾಗೆ ಮಾಡು ಅಂದ. ನನಗೆ ದು;ಖತಡೆಯಲಾಗಲಿಲ್ಲ.ದಡಾರನೆ ಕೆಳಗೆ ಬಿದ್ದು ಅವನ ಕಾಲು ಹಿಡಿದುಕೊಂಡು. ನೀವು ಏನು ಹೇಳಿದ್ರೂ ಕೇಳ್ತೀನಿ ನನಗೆ ಇರೋಕೊಂದು ಜಾಗ ತೋರಿಸ್ರಿ ಅಂತ ಬೇಡಿಕೊಂಡೆ. ಅದಕ್ಕವನು ನಿನ್ನಂತವಳು ಇರೋ ಅಂತ ಜಾಗ ನನಗೆ ಗೊತ್ತಿಲ್ಲ. ಆದರೆ ನಿನ್ನ ತರಾ ಕಸುಬು ಮಾಡೊ ಹೆಂಗಸರು ಇರುವ ಮನೆಯೊಂದನ್ನು ನೋಡಿದಿನಿ. ಒಂದೆರಡು ಸಾರಿ ನಾನಲ್ಲಿಗೆ ಹೋಗಿದ್ದೆ. ಬೇಕಿದ್ರೆ ದೂರದಿಂದ ಆ ಮನೆ ತೋರಿಸ್ತೀನಿ. ನೀನೇ ಹೋಗಿ ಅವರನ್ನು ಕೇಳಿಕೊಳ್ಳಬೇಕು ಅಂದ. ಅವನು ಅಷ್ಟು ಹೇಳಿದ್ದೇ ನನಗೆ ಜೀವ ಬಂದಂತಾಯಿತು.
ಆಟೋದಲ್ಲಿ ನನ್ನ ಕರೆದುಕೊಂಡು ಹೋದವನು ಜನ ಕಡಿಮೆ ಇದ್ದ ಏರಿಯಾದಲ್ಲಿನ ಒಂದು ಮನೆ ತೋರಿಸಿ, ಅದೇ ಮನೆ ನೀನು ಒಳಗೆ ಹೋಗು, ನಾನು ಹೋಗ್ತೀನಿ ಅಂತ ಹೊರಟುಹೋದ. ನಾನು ಹೆದರುತ್ತಲೇ ಮನೆಯ ಬಾಗಿಲು ತಟ್ಟಿದೆ. ಹುಡುಗಿಯೊಬ್ಬಳು ಬಾಗಿಲು ತೆರೆದುಕೂರಿಸಿ. ಒಳಗೆ ಯಾರನ್ನೂ ಅಮ್ಮಾ ಅಂತ ಕರೆದಳು. ಆಗಆ ಮನೆಯ ಅಮ್ಮ ಬಂದಳು. ಸುಮಾರು ಐವತ್ತರ ಪ್ರಾಯದಹೆಂಗಸಾಕೆ. ಬಂದವಳು ನೆಲದ ಮೇಲೆ ಕೂತ ನನ್ನ ಕುಚರ್ಿಯ ಮೇಲೆ ಕೂರಿಸಿ ಹೇಳು ಏನು ನಿನ್ನ ಕತೆ ಅಂದಳು. ಬಹುಶ: ಆ ದಂದೆಯಲ್ಲಿ ವರ್ಷಗಳಿಂದ ಪಳಗಿದ್ದ ಅವಳಿಗೆ ನನ್ನ ಕಣ್ಣೊಳಗಿನ ದು:ಖ, ಅಸಹಾಯಕತೆ ಅರ್ಥವಾಗಿರಬೇಕು. ಆಕೆ ಕೇಳಲಿ ಅಂತಲೇ ಕಾಯುತ್ತಿದ್ದವಳಂತೆ ನನ್ನ ಮನೆಯ ವಂಶಾವಳಿಯಿಂದ ಹಿಡಿದು ಅವಳ ಮನೆಬಾಗಿಲ ಹೊಸ್ತಿಲು ತುಳಿಯುವವರೆಗಿನಎಲ್ಲಾ ವಿಷಯವನ್ನೂ ಒಂದೇ ಸಮನೆ ಹೇಳಿ ಬಿಟ್ಟೆ..ಮದ್ಯೆ ಒಂದೇ ಒಂದು ಮಾತಾಡದೆತಾಳ್ಮೆಯಿಂದ ಕೇಳಿಸಿಕೊಂಡ ಅವಳುಎದ್ದು ಒಳಗೆ ಹೋಗು ಎಂದು ಪಕ್ಕದಲ್ಲಿದ್ದ ಹುಡುಗಿಗೆತಮಿಳು ಬಾಷೆಯಲ್ಲಿ ಏನೋ ಹೇಳಿದಳು. ನನ್ನ ಒಳಗೆ ಕರೆದುಕೊಂಡು ಹೋದ ಹುಡುಗಿ ಬೇರೆ ಸೀರೆ ಕೊಟ್ಟು ಸ್ನಾನ ಮಾಡಿಬಾ ಅಂದಳು. ಸ್ನಾನ ಮಾಡಿ ಬಂದಾದ ಮೇಲೆ ತಿನ್ನಲು ತಿಂಡಿ ಕೊಟ್ಟು ಮನೆ ಹಿಂದುಗಡೆಯ ಒಂದು ರೂಮು ತೋರಿಸಿಇವತ್ತೊಂದು ಹಗಲು ಪೂರಾ ಮಲಗಿ ರೆಸ್ಟ್ ತಗೊ. ಅಂತ ಹೊರಗೆ ಹೋದಳು. ನಾನು ರೂಮಲ್ಲಿ ಮಲಗಿನಾಯಿಮಡಿಕೆಯಂತಾದ ನನ್ನ ಜೀವನದ ಬಗ್ಗೆ ಯೋಚಿಸುತ್ತ ನಿದ್ದೆ ಹೋಗಿ ಬಿಟ್ಟೆ. ಎಚ್ಚರವಾದಾಗ ಸಾಯಂಕಾಲವಾಗಿತ್ತು. ಆಗ ಆ ಮನೆಯ ಅಮ್ಮನಿಂದ ಕರೆ ಬಂದಿತ್ತು. ವಿಶಾಲವಾದ ದೊಡ್ಡ ರೂಮಲ್ಲಿ ಒಂದಷ್ಟು ಹೆಂಗಸರು ಅವಳ ಸುತ್ತ ಕೂತಿದ್ದರೆ ಅಮ್ಮ ಒಂದು ದೊಡ್ಡ ಖುಚರ್ಿಯಲ್ಲಿ ಕೂತಿದ್ದಳು. ನನ್ನ ಕರೆದು ಎದುರಿಗೆ ಕೂರಿಸಿಕೊಂಡು ನಿನಗೆ ಇಲ್ಲಿಯ ಕಸುಬಿನ ಬಗ್ಗೆ ನಾನೇನು ಹೇಳಬೇಕಿಲ್ಲ. ಇದನ್ನು ನಿಯತ್ತಾಗಿ ಮಾಡಿ ಈಮನೆಯಲ್ಲಿ ಹೊಂದಿಕೊಂಡು ಇರ್ತೀನಿ ಅಂದರೆ ಇರಬಹುದು, ಇಲ್ಲಾ ಅಂದರೆ ನೀನು ಎಲ್ಲಿಗೆ ಬೇಕಾದರು ಹೋಗಬಹುದು. ಹೋಗೋಕೆ ದುಡ್ಡುಕಾಸಿನ ಸಹಾಯ ಬೇಕಿದ್ದರೆ ನಾನು ಕೊಡ್ತೀನಿ. ಪೋಲೀಸಿನವರ ಹತ್ತಿರ ಏನಾದರು ಕೆಲಸ ಆಗಬೇಕಾ ಹೇಳು ಅದಕ್ಕೂ ವ್ಯವಸ್ತೆ ಮಾಡ್ತೀನಿ ಅಂದಳು. ನಾನು ಸುಮ್ಮನೆ ಕೂತಿದ್ದೆ. ಕೊನೆಗವಳು ಈಗ ಹುಡುಗಿಯರಿಗೆ ಕೆಲಸದ ಸಮಯವಾಗ್ತಾ ಇದೆ. ನೀನು ಈಗ ಹೋಗಿ ಊಟ ಮಾಡಿ ಮಲಗು ನಾಳೆ ಬೆಳಿಗ್ಗೆ ಒಂಭತ್ತು ಗಂಟೆಯ ಒಳಗೆ ನನಗೆ ನಿನ್ನ ನಿದರ್ಾರ ಹೇಳಬೇಕು ಅಂತ ತಲೆ ನೇವರಿಸಿ ಕಳಿಸಿದಳು. ರಾತ್ರಿ ಊಟ ಮಾಡಿ ಮಲಗಿದವಳಿಗೆ ಯೋಚಿಸೋಕೆ ಏನಿತ್ತು? ಬೆಳಿಗ್ಗೆ ಬೇಗ ಎದ್ದು ಸ್ನಾನಮಾಡಿರೆಡಿಯಾಗಿಹೋಗಿ ಅಮ್ಮನ ಮುಂದೆ ನಿಂತೆ.
ಸರಿಅವತ್ತಿನಿಂದ ಹೊಸ ಬದುಕು ಶುರುವಾಯಿತು. ಆರೇ ತಿಂಗಳಿಗೆ ಆ ಮನೆಗೆ ಒಗ್ಗಿಹೋಗಿಬಿಟ್ಟೆ. ಆ ಮನೆಯಲ್ಲೂ ಕಷ್ಟಗಳಿದ್ದವು. ಹೊತ್ತಲ್ಲದ ಹೊತ್ತಲ್ಲಿ ಪೋಲೀಸರು ಬಂದು ಹಿಂಸೆ ಕೊಡ್ತಾ ಇದ್ದರು. ನಮ್ಮ ಜೊತೆಗೆ ಬಲವಂತದಲ್ಲಿ ಮಲಗಿ ನಾವು ದುಡಿದ ಕಾಸನ್ನೂ ಕಿತ್ತುಕೊಂಡು ಹೋಗುತ್ತಿದ್ದರು. ಜೊತೆಗೆ ಕೇಸುಗಳನ್ನು ಹಾಕುತ್ತಿದ್ದರು. ಪದೇ ಪದೇ ಮನೆ ಬದಲಾಯಿಸಬೇಕಾಗಿ ಬರ್ತಿತ್ತು. ಬೆಂಗಳೂರಿನ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ನಮ್ಮಮನೆ ಬದಲಾಗ್ತಿತ್ತು. ಪೋಲೀಸರ ಜೊತೆಗೆ ನಾವು ಹೋಗುತ್ತಿದ್ದ ಮನೆಗಳ ಏರಿಯಾದ ರೌಡಿಗಳನ್ನೂ ಸಾಕಬೇಕಾಗ್ತಿತ್ತು. ಹೀಗೇನೆ ಹದಿನೈದು ವರ್ಷ ಕಳೆದುಹೋದವು. ಒಂದು ಸಾರಿ ತಮಿಳುನಾಡಿನ ತನ್ನ ಸ್ವಂತ ಊರಿಗೆ ಹೋಗಿದ್ದ ಅಮ್ಮಆಕ್ಸಿಡೆಂಟ್ ಆಗಿ ಅಲ್ಲೇ ಸತ್ತು ಹೋದಳು. ನಂತರ ಆ ಮನೆಯ ಹೆಂಗಸರೆಲ್ಲ ಚದುರಿ ಹೋದಿವಿ. ಇನ್ನೂ ಹರಯ ಇದ್ದ ಹೆಂಗಸರು ಬೇರೆ ಬೇರೆ ಮನೆಗಳಿಗೆ ಶಿಫ್ಟಾದರು. ಮದ್ಯವಯಸ್ಸಿಗೆ ಬಂದು ನಿಂತಿದ್ದ ನನ್ನಂತವರುಬೀದಿ ಪಾಲಾದೆವು. ಅಷ್ಟು ವರ್ಷದ ನೆಮ್ಮದಿ ಹಾಳಾಗಿದ್ದೇ ಸಿಟಿ ಮದ್ಯದ ಬಸ್ ಸ್ಟ್ಯಾಂಡಿನಗಲ್ಲಿಗಳಲ್ಲಿ. ಅಷ್ಟು ದೊಡ್ಡ ಸಿಟಿಯ ಎಲ್ಲ ರೀತಿಯ ಕೊಳಕರು ವಿಕೃತರು ದುಷ್ಟರು ಕೊಲೆಗಡುಕರು ನಮ್ಮನ್ನು ಉರಿದು ಮುಕ್ಕಿ ಬಿಟ್ಟರು. ತಿನ್ನಲೊಂದಿಷ್ಟು ಅನ್ನ, ಸಾಯಂಕಾಲವಾದರೆ ನೋವು ಮರೆಯಲು ಒಂದು ಬಾಟಲಿ ಬ್ರಾಂಡಿಗಾಗಿಯೇ ಬದುಕ ತೊಡಗಿದೆವು. ವರ್ಷಗಳು ಕಳೆಯುತ್ತಿದ್ದಂತೆ ಆ ಗಲ್ಲಿಗಳಿಗೂ ಹೊಸ ಹೆಂಗಸರು ಬರತೊಡಗಿ ನಾವು ಗುಜರಿಗಳಾಗುತ್ತ ಹೋದೆವು. ಕೊನೆಗೊಂದು ದಿನ ಮಲಗಿದರೂ ಗಂಡಸಿನ ಬಾರ ತಡೆಯಲಾರದಷ್ಟು ನಿಶ್ಯಕ್ತರಾದಾಗ ವಿದಿಯಿರದೆ ಬಿಕ್ಷಾಟನೆಗೆ ಇಳಿದೆವು.ಒಂದು ದಿನ ಬಿಕ್ಷೆ ಬೇಡುತ್ತಿದ್ದ ನಮ್ಮನ್ನು ಸರಕಾರದ ಪೋಲೀಸರು ಈ ಕೇಂದ್ರಕ್ಕೆ ತಂದು ಹಾಕಿದರು. ಇಲ್ಲೀಗ ಮೂರು ಹೊತ್ತು ಊಟ ಉಡಲು ಬಟ್ಟೆ ಕೊಡುತ್ತಾರೆ. ಕೆಲಸ ಮಾಡಿಸುತ್ತಾರೆ. ನೋಡೋಕೆ ಇನ್ನೂ ಪರವಾಗಿಲ್ಲ ಅನ್ನೋ ಹೆಂಗಸರನ್ನು ರಾತ್ರಿ ಮಲಗೋಕು ಹೇಳ್ತಾರೆ. ದುಡ್ಡಿಗಾಗಿ ಮಲಗಿದೋರಿಗೆಇದೆಲ್ಲ ಮಾಮೂಲಿ ಅನಿಸಿದೆ. ಹೆಣ್ಣಾದವಳು ಪ್ರಪಂಚದ ಯಾವುದೇ ದೇಶದ ಯಾವುದೇ ಮೂಲೆಗೆ ಹೋದರೂಕಾಲು ಅಗಲಿಸದೆತುತ್ತು ಅನ್ನ ಸಿಗಲ್ಲ ಅನ್ನೋದುನಿಜ. ನಿಮಗೆ ಈ ಮಾತು ಸ್ವಲ್ಪ ಒರಟು ಅಸಹ್ಯ ಅನಿಸಬಹುದು, ಕೇಳುವ ನಿಮಗೇ ಇಷ್ಟು ಅಸಹ್ಯ ಅನಿಸಬೇಕಾದರೆ ಅನುಭವಿಸಿದ ನಮಗೆಷ್ಟು ಅಸಹ್ಯವಾಗಿರಬೇಕು ಯೋಚಿಸಿ. ಕೊನೆಗೊಂದು ದಿನ ಆ ಕೇಂದ್ರದಿಂದಲೂ ತಪ್ಪಿಸಿಕೊಂಡು ಹೊರಬಂದು ದೇವಸ್ಥಾನ ಪಾಕರ್ು ಆಸ್ಪತ್ರೆಗಳ ಹತ್ತಿರ ಬೇಡಿಕೊಂಡು ಜೀವನ ಸಾಗಿಸ್ತಿದಿನಿ. ಪಾಪಿಗಳಿಗೆ ಆಯಸ್ಸು ಜಾಸ್ತಿಯಂತೆ ಹಾಗಾಗಿಸಾವೂ ಬರ್ತಿಲ್ಲ. ಅಂತ ಹೇಳಿ ನಿಟ್ಟುಸಿರು ಬಿಟ್ಟವಳಮಾತಿಗೆ ಸಮಾದಾನ ಹೇಳುವ ಅಗತ್ಯವಾಗಲಿಧೈರ್ಯವಾಗಲಿ ಇರದೆ ಅಲ್ಲಿಂದ ಹೊರಟು ಬಂದೆ.
ಕು.ಸ.ಮಧುಸೂದನ ರಂಗೇನಹಳ್ಳಿ
ಮನ ಮುಟ್ಟುವ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ಅಭಿನಂದನೆಗಳು ಸರ್.