ಲಕ್ಷ್ಮೀದೇವಿ ಪತ್ತಾರ ಕವಿತೆ-ವಿಷ ಪುರುಷರು

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಪತ್ತಾರ

ವಿಷ ಪುರುಷರು

ಇವರ ಭೂ ಹೃದಯದಲ್ಲಿ ಎಷ್ಟೇ
ಮೊಗೆ, ಮೊಗೆದು ಪ್ರೀತಿ ಧಾರೆಯೆರೆದರೂ
ಪ್ರೇಮದ ಹೂ ಅರಳುವುದೇ ಇಲ್ಲ
ದ್ವೇಷಾಸೂಯೆದ ಮುಳ್ಳು ಚುಚ್ಚಿ ರಕ್ತ ಹರಿಸುವುದು ಬಿಡುವುದೇ ಇಲ್ಲ

ಇವರನ್ನು ಎಷ್ಟೇ ಬೆಳ್ಳನೆ ಬೆಳಕಲ್ಲಿ ನಿಲ್ಲಿಸಿ
ಬಾಳು ಬೆಳಗಿಸಿಕೊಳ್ಳುವ ದಾರಿ ತೋರಿದರೂ
ಕತ್ತಲಿನತ್ತ ಓಡಿ ಹೋಗಿ ಕ್ರೌರ್ಯದ ಬೆಂಕಿ ಕಿಡಿ ಸಿಡಿಸುವದ ಬಿಡುವುದೇ ಇಲ್ಲ

ಇವರನ್ನು ‌ಕಾಮಧೇನು ಕಲ್ಪವೃಕ್ಷದ ಬಳಿ ನಿಲ್ಲಿಸಿದರೂ ಅತೃಪ್ತಿ, ಅಶಾಂತಿಯ ಹೊಗೆಯಾಡುವುದು ನಿಲ್ಲಿವುದೇ ಇಲ್ಲ

ಇವರಿಗೆ ಅಮೃತದಂತಹ ಪಂಚ ಪಕ್ವಾನಗಳನ್ನು ಉಣಿಸಿದರೂ
ವಿಷ ಕಕ್ಕುವದ ಬಿಡುವುದೇ ಇಲ್ಲ


ಲಕ್ಷ್ಮೀದೇವಿ ಪತ್ತಾರ

Leave a Reply

Back To Top