ಗುಂಬಳ್ಳಿ ಬಸವರಾಜ್ ಕವಿತೆ-ಬಯಕೆ

ಕಾವ್ಯ ಸಂಗಾತಿ

ಗುಂಬಳ್ಳಿ ಬಸವರಾಜ್..

ಬಯಕೆ

ಕತ್ತಲ ರಾಜ್ಯದಲಿ…
ಪವಾಡ ಪುರುಷರ ನೆಲೆಯಲಿ..
ಬೆಳಗಿತೊಂದು ಪರಂಪರೆಯಲಿ…
ವಿಸ್ಮಯದ ಜಾಗೃತ ಭೂಮಿಯಲಿ..
ಮೌಡ್ಯದ ಅಂಧಕಾರ…
ನಸಿಸಲಿ… ನಸಿಸಲಿ….
ವೈಚಾರಿಕ ಬೆಳಕು…
ಪಸರಿಸಲಿ…. ಪಸರಿಸಲಿ..
ಪ್ರಗತಿಯ ಮುನ್ನೋಟದಲಿ..
ಹೊಸ ಭರವಸೆಗಳಲಿ…
ಚಿಂತನೆಯ ಹಾದಿಯಲಿ..
ನಾಡ ಸಂಸ್ಕೃತಿಯಲಿ..
ಕಲಾ ವೈಭವದ ಮೆರಗಿನಲಿ.. ಉದಯವಾಗಲಿ…
ನನ್ನೂರ ತವರಿನಲಿ..
ಕವಿಗಳ ಸ್ಮಾರಕ…
ಪ್ರೀತಿ -ವಿಶ್ವಾಸದ..
ನಗೆ ಚೆಲ್ಲಿ…..
ನುಡಿ ಭಾಷೆಯಾಗಲಿ…
ಕನ್ನಡ…..
ಅಂತರಂಗದ ಭಾಷೆಯಾಗಲಿ…
ಕನ್ನಡ…
ಎಳೆಯೋಣ ಕನ್ನಡದ ರಥ…
ಕಲಿಸೋಣ ನುಡಿ ಭಾಷೆಯ ..
ಬಯಕೆಯ ಹೊಸ್ತಿಲಲ್ಲಿ….
ನನ್ನದೊಂದು ಬಯಕೆ…
ಬಯಕೆ


ಗುಂಬಳ್ಳಿ ಬಸವರಾಜ್

Leave a Reply

Back To Top