ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ನನಗೂ ಕನಸುಗಳು ಇವೆ
ಏ ಅವ್ವಾ ನನಗೂ
ಕನಸುಗಳಿವೆ ಅವ್ವ
ನಿನ್ನ ಮೈ ರಕ್ತದ
ಹಸೂ ಗೂಸು
ನಿನ್ನ ಕನಸು
ನನಸು ಮಾಡುವ
ಮಗಳು ನಾನವ್ವ
ಬಿಡಮ್ಮ ನನಗೂ
ಆಟ ಆಡುವ ಕನಸು
ಬಾನಲಿ ಹಕ್ಕಿಯಂತೆ
ರೆಕ್ಕೆ ಬಿಚ್ಚಿ ನಲಿಯುವ ಸೊಗಸು
ಛಳಪಿಸಿಲ್ಲವೇ ಕರದಲಿ
ಕತ್ತಿ ಚೆನ್ನಮ್ಮ
ಕತ್ತರಿಸಿ ಹೊಡೆದು
ಉರುಳಿಸಲಿಲ್ಲವೇ?
ಹೆಣಗಳ ರಾಶಿ ಓಬವ್ವ
ಕಟ್ಟ ಬೇಡಮ್ಮ
ಕಟ್ಟಿಳೆ ಸಂಪ್ರದಾಯ
ನನಗೂ ಕನಸ್ಸು ಇದೆ ಅವ್ವ
ಓಡುವೆ ಉಷಾಳಂತೆ
ಬದುಕಿನ ಗಾಡಿ
ಓಡಿಸುವೆ ನಿತ್ಯ ನಿರಂತರ
ವಾದ ತರ್ಕ ಗೋಷ್ಠಿ
ಸಭೆ ಸಮಾರಂಭ
ಬಿಡಮ್ಮ ಹೋಗುವೆ ನನಗೂ
ಕನಸುಗಳು ಇವೆ.
ತರುವೆ ಹೂವನು
ಮನೆಗೆ ಕೀರ್ತಿಯನ್ನು
ಬೆಳಗಿಸುವೆ ಜ್ಯೋತಿಯನು
ಬಿಡಮ್ಮ ಹೊರಗೆ ನನಗೂ ಕನಸುಗಳು ಇವೆ…
ಡಾ ಸಾವಿತ್ರಿ ಕಮಲಾಪೂರ
One thought on “ಡಾ ಸಾವಿತ್ರಿ ಕಮಲಾಪೂರ ಕವಿತೆ-ನನಗೂ ಕನಸುಗಳು ಇವೆ”