ದಾದಾಪೀರ್ ತರೀಕೆರೆ
ಅಮ್ಮಿ
ಅಮ್ಮಿ ನನ್ನ ಬಳ್ಳಿಯಂತೆ
ಹಿಡಿದಿಟ್ಟಿರುವಳು
ನಾನು ತೂಗಿದರು
ಬಾಗಿದರು
ನೆಲಕ್ಕೆ ಬೀಳದಿರಲೆಂದು
ನಾನು ಅವಳ ಪಡಿಯಚ್ಚು
ಅವಳ ನೆರಳಿನಂತಿದ್ಜರು
ಅವಳೆ ನನ್ನ ನೆರಳಾಗಿದ್ದಾಳೆ
ನಾನು ಬೆಳದಿಂಗಳಿರಬಹುದು
ಅವಳು ನನ್ನ
ಅಂತರಂಗದ ಬೆಳಕು
ನಾನು ಹರಿವ ನೀರಾದರು
ಅವಳು ಬತ್ತದ
ನನ್ನೊಳಗಿನ ಸೆಲೆ
ನಾನು ಅವಳಲ್ಲ
ಆದರೂ ಅವಳೆ
ನಾನಾಗಿದ್ದಾಳೆ :
ನಿಜ, ನಾನು ಕವಿಯ
ಕಣ್ಣಿನ ಚಂದಿರೆ
ಅಮ್ಮಿ, ನನ್ನ ಹಿಡಿದಿಟ್ಟ
ನೀಲಿ ಆಗಸ…!
ಎಂದೂ ಅಳಿಯದ ಜಗತ್ತಿನಂತಿರುವ
ನನ್ನ ಅಮ್ಮಿ ನನ್ನ ಪಾಲಿಗೆ
ಒಂದು ಪ್ರತ್ಯೇಕ ಜಗತ್ತೆ ಆಗಿದ್ದಾಳೆ
ದಾದಾಪೀರ್ ತರೀಕೆರೆ