ಮಾಜಾನ್ ಮಸ್ಕಿ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಜಾನ್ ಪದ್ಯಗಳು

ನಿನ್ನ ಪ್ರೀತಿ ಕಾರಾಗೃಹದಲ್ಲಿ ಬಂಧಿಸಿದ ಬಂಧಿಯಾಗಿಸಲಿಲ್ಲ
ಜಾನ್!!
ನೀ ತಿರುಗಿಯೂ ನೋಡದೇ ಹೋದ ಮೇಲೂ ಸ್ವತಂತ್ರವಾಗಿಸಲಿಲ್ಲ

ನೀ ಮೋಸ ಮಾಡಿದ್ದು ಒಳ್ಳೆಯದೇ ಆಯಿತು
ಜಾನ್!!
ನಿದ್ದೆ ಕಾಣದ ನನ್ನ ಕಂಗಳ ಕಂಡು ಹಗಲು ರಾತ್ರಿಗಳು ದಣಿದವು

ಮಾತುಗಳು ಭಾರ ಎನಿಸುತ್ತಿವೆ
ಜಾನ್!!
ಮನ ಮೌನಕ್ಕೆ ಜಾರುತ್ತಿದೆ

ನಿನ್ನ ಪ್ರೀತಿ ನನ್ನ ಜೀವಂತವಾಗಿ ಸುಟ್ಟಿತು ನಿಜ
ಜಾನ್!!
ಸಾಹಿತ್ಯ ಭರವಸೆ ಜೀವಂತಿಕೆ ಚೇತರಿಸಿತು


ಮಾಜಾನ್ ಮಸ್ಕಿ

Leave a Reply

Back To Top