ಕಾವ್ಯಯಾನ

ಗಝಲ್

Assorted-color Kites

ಸ್ಮಿತಾ ರಾಘವೇಂದ್ರ

ಗಜಲ್

ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ.
ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ.

ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/
ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ.

ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/
ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ

ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು /
ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ.

ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/
ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ

**************

Leave a Reply

Back To Top