ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ಗಜಲ್

ಮತ್ತೆ ಮತ್ತೆ ಮನಸಾಗುತಿದೆ ಕಣೇ
ಜೊತೆ ಜೊತೆ ನಿಲ್ಲುವಂತಾಗಿದೆ ಕಣೇ //

ನಿದ್ದೆಯನು ನೀ ಕದ್ದು ಬಿಟ್ಟೆಯಲ್ಲ
ಮಾತುಗಿತು ಮರೆತಂತಾಗಿದೆ ಕಣೇ//

ಸದಾ ನಿನ್ನ ನಾಮ ಧ್ಯಾನದಲ್ಲಿರುವೆ
ಊಟ ಗೀಟ ಸೇರದಂತಾಗಿದೆ ಕಣೇ//

ಪುಟ ಪುಟದಲ್ಲಿ ಚಿತ್ರ ನಿನದೆಯಾಗಿದೆ
ಪ್ರೇಮ ಪತ್ರ ಓದುವಂತಾಗಿದೆ ಕಣೇ//

ಗುರುತಿಸಿದಿಳಲ್ಲ ತಾಯಿ ನನ್ನ ಬದಲಾವಣೆ
ಹಾವ ಭಾವವಗಳೆಲ್ಲ ನಿನ್ನಂತಾಗಿದೆ ಕಣೇ//\

——————-

ಡಾ.ರೇಣುಕಾತಾಯಿ.ಸಂತಬಾ

About The Author

Leave a Reply

You cannot copy content of this page

Scroll to Top