ಇಂದಿರಾ ಮೋಟೆಬೆನ್ನೂರ ಕವಿತೆ-ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್

ಗಜಲ್
(ಶಮಾ ಜಮಾದಾರ ಅವರ ಸಾನಿ ಮಿಸ್ರಾಕ್ಕೆ ಬರೆದ ಗಜಲ್)

ನಿನ್ನ ಪ್ರೇಮದ ಪರಿಯ ಹೇಗೆ ಬಣ್ಣಿಸಲಿ ಸಖಾ
ಕಣ್ಣ ತುಂಬುವ ಒಲವ ಹೇಗೆ ವರ್ಣಿಸಲಿ ಸಖಾ

ಎದೆ ತುಂಬಿದ ಜೀವಫಲವ ಹೇಗೆ ತಣಿಸಲಿ ಸಖಾ
ಮನ ದುಂಬಿದ ನೆನಪುಗಳ ಹೇಗೆ ಕುಣಿಸಲಿ ಸಖಾ

ದುಂಬಿ ಕಂಗಳ ನೋಟವ ಹೇಗೆ ಮಣಿಸಲಿ ಸಖಾ
ಭಾವ ಬಿತ್ತನೆಯ ಹನಿಯ ಹೇಗೆ ಹಣಿಸಲಿ ಸಖಾ

ನಿನ್ನ ಚಿಗುರ ಚುಕ್ಕಿ ಮುಗುಳ ಹೇಗೆ ಎಣಿಸಲಿ ಸಖಾ
ಸ್ನೇಹ ಬುತ್ತಿಬಿಚ್ಚಿ ಸವಿಯ ಹೇಗೆ ಉಣಿಸಲಿ ಸಖಾ

ನೋವನುಂಗಿ ನಗುವ ರೀತಿಯ ಹೇಗೆ ಮನ್ನಿಸಲಿ ಸಖಾ.
ಇಂದುವಿನ ಹೃದಯ ಮಿಡಿತ ಹೇಗೆ ಕೇಳಿಸಲಿ ಸಖಾ


ಇಂದಿರಾ ಮೋಟೆಬೆನ್ನೂರ.

Leave a Reply

Back To Top