ಕಾವ್ಯ ಸಂಗಾತಿ
ಪ್ರೊ ರಾಜನಂದಾ ಘಾರ್ಗಿ
ಗಜಲ್
(ಶಮಾ ಜಮಾದಾರ ಅವರ ಮಿಶ್ರಾ ಬಳಸಿ ತರಹಿ ಗಜಲ್)
ನಿನ್ನ ಪ್ರೇಮದ ಪರಿಯ ಹೇಗೆ ಬಣ್ಣಿಸಲಿ ಸಖಾ
ಕಣ್ಣಿನ ಮಾಂತ್ರಿಕ ಮೋಡಿಯ ಹೇಗೆ ವರ್ಣಿಸಲಿ ಸಖಾ
ಮಾತಿನ ಮಳೆ ಸುರಿಸಿ ಕಾಮನ ಬಿಲ್ಲು ರಚಿಸಬಲ್ಲೆ
ನಿನ್ನ ಮಾತಿನ ಜಾಡುಗಳ ಹೇಗೆ ಶೋಧಿಸಲಿ ಸಖಾ
ಮೌನದ ಭಾಷೆಯ ನುಡಿದು ಅಂತರಾಳ ತಟ್ಟಿ ಬಿಡುವೆ
ನಿನ್ನ ಭಾಷೆಯ ಪದಬಂಧಗಳ ಹೇಗೆ ಬಿಡಿಸಲಿ ಸಖಾ
ನೋಟ ಸಾಕು ನಿನಗೆ ಮನ ಹೊಕ್ಕು ಜಾಲಾಡಿಸಲು
ನೋಟ ಬಿತ್ತಿದ ಭಾವಗಳ ಹೇಗೆ ತೋರಿಸಲಿ ಸಖಾ
ನಿರ್ಲಿಪ್ತ ಭಾವ ಹೊತ್ತು ಕುಳಿತಿರುವ ಸ್ತಿತಪ್ರಜ್ಞ ನೀನು
ಸುಪ್ತವಾದ ರಾಜಿಯ ಪ್ರೇಮ ಹೇಗೆ ಮರೆಯಲಿ ಸಖಾ
ಪ್ರೊ ರಾಜನಂದಾ ಘಾರ್ಗಿ