ಮಾಜಾನ್ ಮಸ್ಕಿ-ಜಾನ್ ಪದ್ಯಗಳು

ಕಾವ್ಯ ಸಂಗಾತಿ

ಜಾನ್ ಪದ್ಯಗಳು

ಮಾಜಾನ್ ಮಸ್ಕಿ

ಅತ್ತು ಅತ್ತು ಕಣ್ಣೀರಲ್ಲೇ ಮೆತ್ತಗಾದೆ
ಜಾನ್!!
ಬದುಕುವ ಆಸೆಯಲ್ಲಿ ಮನಸ್ಸು ಕಲ್ಲಾಗಿದೆ

ಪ್ರೀತಿಯನ್ನು ದೇವರಿಗೆ ಹೋಲಿಸಿದ್ದಾರೆ ಅಲ್ವಾ
ಜಾನ್!?
ಅದಕ್ಕೆ ನನ್ನ ಕಣ್ಣಿಗೆ ಪ್ರೀತಿ ಎಲ್ಲೂ ಕಾಣ್ತಾನೇ ಇಲ್ಲ

ಹೋದವರು ಮತ್ತೆ ಬರುವುದಿಲ್ಲ ಅಂತ ಗೊತ್ತು
ಜಾನ್
ಬೇಡವೆಂದರು ನೆನಪುಗಳು ಕಾಡುವುದು ಏಕೆ??

ನಿನ್ನ ಸಾಂಗತ್ಯ ಬಯಸಿತ್ತು ಅದೆಂದೋ
ಜಾನ್!!
ಸಂಕಲ್ಪ ಪ್ರೀತಿಯ ದೀಪ ಬೆಳಗಿಸಿದೆ-

—————————————————

ಮಾಜಾನ್ ಮಸ್ಕಿ

One thought on “ಮಾಜಾನ್ ಮಸ್ಕಿ-ಜಾನ್ ಪದ್ಯಗಳು

  1. ಎರಡನೇ ಪ್ಯಾರಾ ತುಂಬಾ ಸೊಗಸಾಗಿದೆ
    ದಾದಾಪೀರ್ ತರೀಕೆರೆ

Leave a Reply

Back To Top