ಮಾಜಾನ್ ಮಸ್ಕಿ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ನಿನ್ನ ಕಂಗಳ ಸ್ಪರ್ಶಕ್ಕೆ ತವಕಿಸುತ್ತಿದೆ ಜೀವ
ಕಣ್ಣೀರಲ್ಲೇ ಬದುಕು ಅಭಿಷೇಕ ಸುರಿಸುತ್ತಿದೆ ಜೀವ

ಇಷ್ಕ ಬೆಲ್ಲದ ಪಾನಿಯದಂತೆ ತಂಪಾಗಿಸುತ್ತೆ ಎಂದು ಕೇಳಿದ್ದೆ
ಬಡಪಾಯಿ ಸುಡುವ ನೆನಪುಗಳಲ್ಲೇ ಬದುಕುತ್ತಿದೆ ಜೀವ

ನೀನಿಲ್ಲದಿದ್ದರೂ ಎಂದಿನಂತೆ ವಸಂತ ಬಂದಿದೆ ಸನಿಹ
ವಿರಹದಲ್ಲಿ ಪಯಣಿಸುವುದು ಕಲಿಯುತ್ತಿದೆ ಜೀವ

ಕಷ್ಟದಲ್ಲಿ ಜೊತೆಯಾಗಿ ಸುಖದಲ್ಲಿ ಮಿಂದಿರುವೆ
ನಿನ್ನ ಖಯಾಲಿ ದುನಿಯಾದಲ್ಲಿ ವಿಹರಿಸುತ್ತಿದೆ ಜೀವ

ನೀನು ಪ್ರೇಮದ ಉರಿಯಲ್ಲಿ ತಳ್ಳಿದ್ದು ಒಳ್ಳೆಯದೇ
“ಮಾಜಾ” ಒಲವಿನ ನಿಜ ಅರ್ಥ ತಿಳಿಯುತ್ತಿದೆ ಜೀವ


Leave a Reply

Back To Top