ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ ಕಲಬುರಗಿ
ಗಝಲ್
ಯಾತನೆಗಳ ಸುಡಲೊಂದು ಸ್ಥಳವಿರಬೇಕಿತ್ತು
ನೋವುಗಳ ಹೂಳಲೊಂದು ಮಸಣವಿರಬೇಕಿತ್ತು
ಸುಂದರ ಕಾಮನಬಿಲ್ಲು ಸಂತಸ ನೀಡದಾದಾಗ
ಕಂಬನಿ ಹರಿದು ಸೇರಲೊಂದು ಸರೋವರವಿರಬೇಕಿತ್ತು
ಹಳಸಿದ ಆಸೆಗಳ ಅನ್ನ ನೋಡಿ ಹಸಿವು ತಲ್ಲಣಿಸಿದೆ
ಹರಿದ ಕನಸು ಹೊಲಿಯಲೊಂದು ದಾರವಿರಬೇಕಿತ್ತು
ಹುಸಿ ಮಾತುಗಳ ಸೋಗಿಗೆ ಮೌನ ಮಿಡಿದಿದೆ ನೋಡಾ
ಮಡಿದ ಭರವಸೆಯು ಅರಳಲೊಂದು ಮರವಿರಬೇಕಿತ್ತು
ಬದುಕಿದು ನಾಲ್ಕು ಪುಟಗಳ ಪುಸ್ತಕ ‘ವಾಣಿ ‘
ದಣಿದ ಭಾವ ವಿರಮಿಸಲೊಂದು ಪುಟವಿರಬೇಕಿತ್ತು
Good one
Thank you Sir
ತುಂಬಾ ಆಳವಾಗಿದೆ ಗಜಲ್.”ಇರಬೇಕಿತ್ತು” ಎನ್ನುವ ರೂಪಕವು ನೆಪ ಮಾತ್ರ.ಆದರೆ,ಹೂಳಿಡುವ ಪ್ರತಿಮಾ ಸಂಕೇತವು ಗಜಲ್ ಕಿರೀಟವಾಗಿದೆ.
Thank you so much Sir