ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ರೊಕ್ಕ
ರೊಕ್ಕ
ಪರಪಂಚ ರೊಕ್ಕ ರೊಕ್ಕ ಅಂತೈತಿ
ರೊಕ್ಕಾನ ಹೊಗಳಾತ ಇರತೈತಿ
ರೊಕ್ಕ ತನಗತಾನ ಏನಂತೈತಿ
ಅದನ ತಟಗ ಕೇಳ್ರಿ
ನಾ ರೊಕ್ಕ ನಾ ರೊಕ್ಕ
ಸತ್ತಾಗ ನಾ ನಿಮ್ ಜೊತೆಗೆ ಬರಾಂಗಿಲ್ಲ
ಇದ್ದಾಗ ನಾ ಇಲ್ದೆ ಇದ್ರೆ ನಿಮ್ ಜೀವನ ನಡೆಂಗಿಲ್ಲ
ನಾ ರೊಕ್ಕ ಉಪ್ಪಿನಂಗ ಅಗತ್ಯ ಅದಿನಿ
ಅಗತ್ಯಕ್ಕಿಂತ ಅತಿ ಬಳಸಿದ್ರ
ಜೀವನದ ಸಾರಾನ ಹದಗೆಡಸ್ತಿನಿ
ನಾ ರೊಕ್ಕ ನಿಮ್ಮ ಹಂತ್ಯಾಕ ಇರೋತನಕ
ಎಲ್ಲರೂ ಇರ್ತಾರ ನಿಮ್ಮ ಹಂತ್ಯಾಕ
ನಾ ರೊಕ್ಕ ದಿನಾ ದಿನಾ ಹೊಸ ಸಂಬಂಧ
ಮಾಡ್ತಾ ಇರ್ತೀನಿ
ಹಳೆಸಂಬಂಧನಾ ಹದಗೆಡಿಸಿಬಿಡ್ತಿನಿ
ನಾ ಎಲ್ಲಾದಕು ತಲಕಾವೇರಿ
ಆದ್ರೂ ನಂಗೊತ್ತಿಲ್ಲ ಜನ ಯಾಕ್
ನನ್ ಬೆನ್ ಹತ್ಯಾರ
ನಾ ರೊಕ್ಕ ನನಗೆ ಭಾಳ ಹೆಸರು ಅದಾವ
ಮುಡಿಪು,ಚಂದಾ,ದಕ್ಷಿಣೆ, ವರದಕ್ಷಿಣೆ
ತೆರವು,ವಂತೆ,ಇನ್ನೂ ಹೆಚ್ಚಂದ್ರೆ ಲಂಚ
ಸಾಲ,ತೆರಿಗೆ ಪೀಸ್, ಪಿಂಚಣಿ ಹಿಂಗ ನನಗೆ
ಬ್ಯಾರೆ ಬ್ಯಾರೆ ಖಾತೆ ಕೊಟ್ಟಾರಿ
ಎಷ್ಟು ಛೊಲೋ ಕಾಣ್ತೀನಿ ಅಷ್ಟ್ ಕೆಟ್ಟ ಅದಿನಿ
ಬೆವರು ಸುರಿಸಿ ದುಡಿದ್ರ ಹರುಷ ನೆಮ್ಮದಿ ತರ್ತಿನಿ
ಕೆಟ್ಟ ದಾರಿಯಿಂದ ಬಂದರೆ ಶಾಪ ರೋಗ
ಅಶಾಂತಿ ತರ್ತಿನಿ
ಎಲ್ಲಾನೂ ಹದಗೆಡಸಿ ದಂಡಕ್ಕೆ ಗುರಿ ಮಾಡ್ತಿನಿ
ನನಗಾಗಿ ಧೀನರು ಧನವಂತರು ಅಳೋದು ವಿಲಿವಿಲಿ ಒದ್ದಾಡೋದು ಕಂಡಿನಿ
ನಾ ರೊಕ್ಕ ಅದಿನಿ
ಎಲ್ಲಾದಕ್ಕೂ ತಲಕಾವೇರಿ ಅದಿನಿ
ವಿಚಾರಮಾಡಿ ಮುಟ್ಟಿ ನನ್ನ
ನಾ ರೊಕ್ಕ ಅದಿನಿ.
Super lalitha