ಮಾಜಾನ್ ಮಸ್ಕಿ ಕವಿತೆ-ಬಯಕೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಬಯಕೆ

ಎದೆಯಾಳದಲ್ಲಿ ಹೆಪ್ಪಿಟ್ಟ
ಭಾವ
ನೆನಪುಗಳು ಹೊಮ್ಮಿ
ಘಮಲು
ಮುದುಡಿ ಅರಳಿ
ಮುದದಿ
ನೋವಿನಲ್ಲೂ ಸುಖ
ಪ್ರೀತಿಯ ಅಮಲು
ತಾಗದೆ ಇರುವುದೇ
ನಿಶೆಯ ಕನಸುಗಳು
ಉಷೆಯ ಬಾನಂಗಳದಲ್ಲಿ
ಚಿತ್ತಾರ
ಅಳಿಸಿದರು ಮತ್ತೇ
ಹೊಸತದಲ್ಲಿ ಮೂಡುವ
ಬಯಕೆ
ಮುಗಿಯದ ತಲ್ಲಣ
ಹೊತ್ತ ಆಸೆಯ ಬುತ್ತಿ
ತೀರದ ಈಡೇರಿಕೆಗೆ
ಚಿಗುರುವುದು
ವಸಂತ….


Leave a Reply

Back To Top