ಹಮೀದಾ ಬೇಗಂ ದೇಸಾಯಿ-ಅಂತರಂಗದಲೆ….

ಕಾವ್ಯಸಂಗಾತಿ

ಹಮೀದಾ ಬೇಗಂ ದೇಸಾಯಿ

ಅಂತರಂಗದಲೆ….

.

ಮನೋಶರಧಿಯಲಿ
ಅಡಗಿದ ಭಾವಚಿಪ್ಪುಗಳು
ತವಕಿಸುತಿಹವು
ಅಲೆಯಾಗಿ ತೇಲಲು..

ಪಕ್ವಗೊಳುತಿಲ್ಲ
ಅದೇಕೋ ಚಿಪ್ಪುಗಳು
ಭಾರ ಮನದಿಂದ
ಎದ್ದೇಳಲಾರದೆ…

ಚೈತನ್ಯದ ಬೆಳಕು
ಅಂತರಂಗದೊಳು
ಇಳಿಯದಾಗಿದೆ
ಮನದಾಳಕೆ..

ಬಿಡಿಸಲಾಗದೆ
ಹೆಣಗಾಡುತಿವೆ
ಚಿಪ್ಪಿನೊಳಗಣ
ಭಾವಕಣಗಳು..

ಕಾದು ಕುಳಿತಿವೆ
ಸ್ವಾತಿ ಹನಿ ಹನಿಗೆ
ಮುತ್ತಾಗಲು;
ಒಲವಿನಲೆಯಾಗಿ
ತೇಲಿ ಬರಲು…


3 thoughts on “ಹಮೀದಾ ಬೇಗಂ ದೇಸಾಯಿ-ಅಂತರಂಗದಲೆ….

    1. ಮನದ ಚಿಪ್ಪಿನೊಳಗಿನ ಭಾವದಲೆಗಳು ರೂಹು ತಾಳಲಾರದೆ ಚಡಪಡಿಸುವ ಪರಿಯನ್ನು ತಮ್ಮ ಕವಿತೆ ತುಂಬ ಸೊಗಸಾಗಿ ಹಿಡಿದಿಟ್ಟಿದೆ.

Leave a Reply

Back To Top