ವಿಶ್ವನಾಥ ಗೌಡ ಕವಿತೆ-ಮಾನವ ಜಾಗೃತನಾಗು

vigowda

ಕಾವ್ಯ ಸಂಗಾತಿ

ವಿಶ್ವನಾಥ ಗೌಡ

ಮಾನವ ಜಾಗೃತನಾಗು

ಏ ಮಾನವ ಜಾಗೃತನಾಗು
ಉಳಿಸಬೇಕು ಜಗವಾ !!ಪ!!
ಈ ದುಷ್ಟ ವ್ಯಸನಗಳ
ದೂರ ಮಾಡಲು ಮಾಡಬೇಕು ಮನವ!!ಅ ಪ!!

ದುಷ್ಟ ಚಟಗಳ ಅಟ್ಟಹಾಸಕೆ ಮನವ ನೂಕಬೇಡ
ಮಾನ ಮೂರಾಬಟ್ಟೆ ಮಾಡಿ ಜಗದಿ ತಿರುಗಬೇಡ
ಹಣವು ಒಂದೆ ಗುರಿಯು ಎಂದು ಹಿಂದೆ ಹೋಗಬೇಡ
ಬಂದ ದಾರಿಯ ಒಮ್ಮೆ ತಿರುಗಿನೋಡು
ಮರೆತು ಮರೆಯಬೇಡ.||೧||

ಏ ಮಾನವ ಜಾಗೃತನಾಗು
ಉಳಿಸಬೇಕು ಜಗವ

ಮೋಜು ಮಸ್ತಿಯ ಪಾಶಕೆ ಸಿಲುಕಿ
ಅಡ್ಡ ದಾರಿ ತುಳಿಯಬೇಡ
ಜಾಣತನವ ತೋರಲು ಹೋಗಿ
ಅಜ್ಞಾನಿಯಾಗಬೇಡ
ಅಮಾಯಕರ ಬೀದಿಗೆಳೆದು ನಗುತಾ ನೋಡಬೇಡ
ಅವರ ಕನಸುಗಳು ಚೂರು ಮಾಡಬೇಡ !!೨!!

ಏ ಮಾನವ ಜಾಗೃತನಾಗು
ಉಳಿಸಬೇಕು ಜಗವ

ಎಲ್ಲಕು ಮಿಗಿಲು ಈ ಮಾನವ ಜನ್ಮ ಅದನು ಹಾಳು ಮಾಡಬೇಡ ಮಾನವೀಯತೆಯ ಮರೆತು ನೀನು
ಅವರು ಇವರನು ಪಾಶಕೆ ಸೆಳೆಯದೆ
ಉಳಿಸಿ ನಮ್ಮ ಜಗವ
ಮಾಡಿ ಮಾದಕ ವ್ಯಸನ ಮುಕ್ತ ಜಗವ !!೩!!

ಏ ಮಾನವ ಜಾಗೃತನಾಗು
ಉಳಿಸಬೇಕು ಜಗವಾ !!ಪ!!
ಈ ದುಷ್ಟ ವ್ಯಸನಗಳ
ದೂರ ಮಾಡಲು ಮಾಡಬೇಕು ಮನವ!!ಅ ಪ!!


    One thought on “ವಿಶ್ವನಾಥ ಗೌಡ ಕವಿತೆ-ಮಾನವ ಜಾಗೃತನಾಗು

    1. ಎಚ್ಚರಿಕೆಯ ನುಡಿ ಏ ಕವನ ಉಳಿಸು ಜಗವ ತುಂಬಾ ಚೆನ್ನಾಗಿದೆ.”. ಯಾರನ್ನು ಪ್ರೀತಿಸಲು ಮನದಲ್ಲಿ ಏನೊಂದು ಬಾಳಿಸನುಜಗದಲ್ಲಿ”ರಾಜಕುಮಾರ ಅವರ ಹಾಡಿದೆಯಲ್ಲ

    Leave a Reply

    Back To Top