ಕಾವ್ಯ ಸಂಗಾತಿ
ಯೋಗೇಂದ್ರಾಚಾರ್ ಎ ಎನ್
ಗೋರಿಯೊಳಗಿಂದ ಗುಡಿಗೆ
ಕಾಲ ಉರುಳುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ಹೂವು ಅರಳುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ಸೂರ್ಯ ಕ್ಷುದ್ರನಾಗಿ ಬದುಕನು ಸುಡುತ್ತಿದ್ದಾನೆ
ಚಂದಿರ ನಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ಗಾಳಿ ಬಿರುಸಾಗಿ ಹೃದಯವನು ಬರುಡಾಗಿಸಿದೆ
ಕನಸು ಕರಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ಬಾಂದಳ ಬರಿದಾಗಿ ಕಂಗಳನು ಕೊರಗಿಸುತ್ತಿದೆ
ನಕ್ಷತ್ರ ಮಿನುಗುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ
ನೀ ದೂರಾಗಿ ಮೌನಯೋಗಿಯನು ವಧಿಸಿರುವೆ
ಹೃದಯ ಹಾಡುತ್ತಲಿಲ್ಲ ನಿನಗೆ ನೆನಪಾಗುತ್ತಿಲ್ಲವೆ