ಕಾವ್ಯ ಸಂಗಾತಿ
ಅರುಣಾ ರಾವ್
ಬಾಳಬಂಡಿ
ಎತ್ತಣದ ಮಾಮರ ಎತ್ತಣದ ಕೋಗಿಲೆ
ಒಂದಾಗೆ ಉದಯಿಸಿತು ಕೂಜನದ ಗಾನ
ಎತ್ತಣದ ಗಂಡೋ ಯಾರು ಹೆತ್ತ ಹೆಣ್ಣೋ
ಬೆರೆತಾಗ ಮನೆ ಮನದ ಲಗ್ನ ಸಮ್ಮಿಲನ
ಅಳುವಲ್ಲಿ ನಗುವಲ್ಲಿ ಮತ್ತೆ ಮುನಿಸಲ್ಲಿ
ಏಳುಗಳು ಬೀಳುಗಳಲ್ಲಿ ಬಡತನದಲ್ಲಿ
ಹಿಡಿದ ಕೈ ಬಿಡದೆ ಅನುಗಾಲ ಜೊತೆಯಾಗಿ
ಸಾಗಿರಲು ಸಂತಸವು ಈ ಬಾಳ ನೌಕೆ
ಸರಸ ವಿರಸಗಳು ಊಟದುಪ್ಪಿನಕಾಯಿ
ಮದುವೆಯೇನು ಮಕ್ಕಳಾಟವೆ ಮತ್ತೆ
ಹೊಂದಿಕೆ ಜೊತೆಗೆ ಒಲುಮೆ ಬದುಕಾಗಿ
ದೇವರೂಡಿಹ ಜೋಡೆತ್ತು ಬಾಳ ಬಂಡಿಗೆ