ಈಶ್ವರ ಜಿ ಸಂಪಗಾವಿ ಕವಿತೆ-ಗಜಲ್.

ಕಾವ್ಯ ಸಂಗಾತಿ

ಗಜಲ್.

ಈಶ್ವರ ಜಿ ಸಂಪಗಾವಿ

ಹಾಡು ಮರೆಯದ ಕೋಗಿಲೆ ಹಾಡಲಿಲ್ಲ
ಬಾಡುವ ಹೂಗೊಂಚಲಿಂದು ಬಾಡಲಿಲ್ಲ

ಕಾಡುವ ಭಾವಗಳ ಬಂಧ ಗಾಢವಾಗಿದೆ
ನೋಡುವ ನೋಟದಿ ಚಿತ್ರ ಮೂಡಲಿಲ್ಲ

ಕಂಬನಿ ತುಂಬಿ ಕಂಗಳಲಿ ದೃಷ್ಟಿ ಕುಂದಿದೆ
ಬಂಗಾರ ಮೊಗದಿ ಕಾಂತಿಯು ಕಾಡಲಿಲ್ಲ

ನೆನಪುಗಳ ತೋಟ ಒಣಗಿ ಬಣಗುಟ್ಟಿದೆ
ಕನಲಿಕೆ ಬಯಕೆಯ ನೀರು ತೋಡಲಿಲ್ಲ

ಬೇಡಿದ ಧ್ಯಾನದಲಿ ಈಶನ ದರ್ಶನವಿಲ್ಲ
ಕೂಡುವ ಶಾಂತಿಗಾಗಿ ನಿದಿರೆ ಮಾಡಲಿಲ್ಲ


ಈಶ್ವರ ಜಿ ಸಂಪಗಾವಿ

Leave a Reply

Back To Top