ಕಾವ್ಯ ಸಂಗಾತಿ
ವಿಶಾಲ್ ಮ್ಯಾಸರ್
ಒಂದು_ಕವಿತೆ
ಬಳ್ಳಿ ಬೇರು ತಬ್ಬಿ
ಎಲೆ ಟೊಂಗೆ ಹಬ್ಬಿ
ಹೂವಿನಂತೆ ಅರಳುವ
ಒಂದು ಕವಿತೆ
ಗಿಡ ಗಿಡಕೆ ನೆಗೆದು
ಪ್ರೀತಿಯ ಪರಾಗ ಹೊತ್ತು
ದುಂಬಿಯಂತೆ ಮುತ್ತಿಕ್ಕುವ
ಒಂದು ಕವಿತೆ
ಇರುಳ ಕರುಳ ಸೀಳಿ
ಕೊಳೆತ ಘಮಟಿಗೆ
ಕಾಳಕಪ್ಪಡಿಯಂತೆ ಪರಾಗ ತರುವ
ಒಂದು ಕವಿತೆ
——————————————————————
ವಿಶಾಲ್ ಮ್ಯಾಸರ್
Super
ವಿಶ್ವ ಕವಿತಾ ದಿನದ ಶುಭಾಶಯ