ಶಂಕರಾನಂದ ಹೆಬ್ಬಾಳರವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಮನವೆಂಬ ಗೋಪುರದಿ ಉಳಿಯುವ ಆಸೆಯಿಲ್ಲ
ಎದೆಯೆಂಬ ಮಹಲಿನಲ್ಲಿ ಸುಳಿಯುವ ಆಸೆಯಿಲ್ಲ

ಪುಟ್ಟ ಜೀವಿಗೆ ನೀನೊಂದು ಚಿಕ್ಕ ಪ್ರಪಂಚವಾದೇ
ಸನಿಹದೊಳು ಒತ್ತಂಬದಿ ಎಳೆಯುವ ಆಸೆಯಿಲ್ಲ

ಕೈಬಿಡುವ ಪ್ರಮಾದವೆ ಬಂದಿಲ್ಲವಿಲ್ಲಿ ತಿಳಿದುಕೋ
ನೇಹದ ಪ್ರಿಯಕರನಲ್ಲಿ ಮುಳಿಯುವ ಆಸೆಯಿಲ್ಲ

ಊಸರವಳ್ಳಿಯ ತೆರದಂತೆ ಬಣ್ಣ ಬದಲಿಸಬೇಡ
ಉದಿಸಿದ ಭಾವಗಳನು ತುಳಿಯುವ ಆಸೆಯಿಲ್ಲ

ಅಭಿನವನ ಮೃದು ಹೃದಯಕ್ಕೊಂದು ಬೆಲೆಯಿದೆ
ಕನಸುಗಳಿಗೆ ಕಪ್ಪುಮಸಿ ಬಳಿಯುವ ಆಸೆಯಿಲ್ಲ


Leave a Reply

Back To Top