ಡಾ. ತಯಬಅಲಿ. ಅ. ಹೊಂಬಳ ಕವಿತೆ-ಏನೆಲ್ಲ ಇರಬೇಕು

ಕಾವ್ಯ ಸಂಗಾತಿ

ಏನೆಲ್ಲ ಇರಬೇಕು

ಡಾ. ತಯಬಅಲಿ. ಅ. ಹೊಂಬಳ

ನಗುವಿನೊಂದಿಗೆ ಮಗು ಬೇಕು
ಮಗುವಿನೊಂದಿಗೆ ಅಮ್ಮ ಬೇಕು
ಅಮ್ಮನಿಗೊಂದು ಅಪ್ಪ ಬೇಕು
ಅಪ್ಪನಿಗೊಂದು ಮನೆ ಬೇಕು
ಮನೆಗೊಂದು ಮಗು ಬೇಕು

ಮಗುವಿಗೊಂದು ಪಾಠ ಬೇಕು
ಪಾಠದೊಂದಿಗೆ ಆಟ ಬೇಕು
ಆಟದೊಂದಿಗೆ ಸ್ನೇಹಿತರಿರಬೇಕು
ಸ್ನೇಹಿತರಲ್ಲಿ ಒಗ್ಗಟ್ಟಿರಬೇಕು
ಒಗ್ಗಟ್ಟಿನಲ್ಲಿ ಬಲವಿರಬೇಕು

ಬಲದಲ್ಲಿ ಶಕ್ತಿ ಇರಬೇಕು
ಶಕ್ತಿಯಲ್ಲಿ ಯುಕ್ತಿ ಇರಬೇಕು
ಯುಕ್ತಿಯಲ್ಲಿ ಗುರು ಕಾಣಬೇಕು
ಗುರುಗಳಲ್ಲಿ ಜ್ಞಾನ ಇರಬೇಕು
ಜ್ಞಾನದಲ್ಲಿ ಧ್ಯಾನ ಇರಬೇಕು

ಧ್ಯಾನದಲ್ಲಿ ಮನ ಇರಬೇಕು
ಮನದಲ್ಲಿ ಗುರಿ ಇರಬೇಕು
ಗುರಿಯಲ್ಲಿ ಮನಸ್ಸೀರಬೇಕು
ಮನಸ್ಸಿನಲ್ಲಿ ಛಲ ಇರಬೇಕು
ಛಲದಲ್ಲಿ ಪ್ರಯತ್ನ ಇರಬೇಕು

ಪ್ರಯತ್ನದಲ್ಲಿ ಗೆಲುವಿರಬೇಕು
ಗೆಲುವಿನಲ್ಲಿ ಯಶಸ್ಸು ಇರಬೇಕು
ಯಸಸ್ಸಿನಲ್ಲಿ ಸಾರ್ಥಕತೆ ಇರಬೇಕು
ಸಾರ್ಥಕತೆಯಲ್ಲಿ ದೇಶಾಭಿಮಾನ ಇರಬೇಕು
ದೇಶಾ


2 thoughts on “ಡಾ. ತಯಬಅಲಿ. ಅ. ಹೊಂಬಳ ಕವಿತೆ-ಏನೆಲ್ಲ ಇರಬೇಕು

Leave a Reply

Back To Top