ಕಾವ್ಯ ಸಂಗಾತಿ
ಗಜಲ್
ರೋಹಿಣಿ ಯಾದವಾಡ
ಮಧುರ ನೆನಪೊಂದು ಸುಳಿದು ಕಾಡುತಿದೆ ನನ್ನಲಿ
ಸುಮಧುರ ಭಾವವೊಂದು ಕನಲಿ ಹಿಂಡುತಿದೆ ನನ್ನಲಿ
ಭವದ ತಲ್ಲಣಗಳು ನಿದ್ದೆಗೆಡಸಿವೆ ನನ್ನ ಬದುಕಲಿ
ಇಹದ ಲೋಕದಲಿ ಉಳಿದು ಸಾಗುತಿದೆ ನನ್ನಲಿ
ಮನದ ತಾಕಲಾಟ ಯಾರ ಇದಿರಿಗೆ ಹೇಳಿಕೊಳ್ಳಲಿ
ಸ್ನೇಹದ ಒಡನಾಟದಿ ಅಳಿದು ಹೋಗುತಿದೆ ನನ್ನಲಿ
ಭಾವ ಲೋಕದಲಿ ಬಿಕರಿಗಿವೆ ಭಾವನೆಗಳು ಇಲ್ಲಿ
ಭಾವನೆಗಳ ಖರೀದಿಯಲಿ ಸೆಳೆದು ಉಳಿದಿದೆ ನನ್ನಲಿ
ಮನಸ್ಸಿನ ಭಾವಗಳು ಗಟ್ಟಿಗೊಳಲಿ ಎಂದಳು ರೋಹಿ
ಸುಮಧುರ ಭಾವಲೋಕ ಬೆಳೆದು ನಿಂತಿದೆ ನನ್ನಲಿ.