ಕಾವ್ಯ ಸಂಗಾತಿ
ಮರ ಮತ್ತು ಜೀರ್ಣೋದ್ಧಾರ
ನಾರಾಯಣ ಭಾಗ್ವತ
ಹಸಿದ ಹಕ್ಕಿಯ ಒಡಲು
ತುಂಬಿದ…ಹಣ್ಣು
ಹಿಕ್ಕೆಯಿಂದ ..ಭೂಮಿಗೆ ಬಿದ್ದ ಬೀಜ.!
ಗಿಡವಾಗಿ…ಹೆಮ್ಮರವಾಗಿ
ನೆರಳ ತಂಪನ್ನೆರೆದು…
ಅರಳಿ …ನಿಂತಿದೆ…!
ರಸ್ತೆಯ…ಪಕ್ಕ
ಪ್ರತಿದಿನ….
ಮರದ ಬುಡದಲ್ಲೀಗ ..
ಗಂಟೆಯ..ಸದ್ದು..!
ಎಂದೋ…ಬಿದ್ದೇ ಇದ್ದ
ಕಲ್ಲು..ಮೈಕೆಂಪಾಗಿಸಿ.!
ಧಡಕ್ಕನೆ..ಎದ್ದು ನಿಂತಿದೆ!
ಮರದಡಿ ..ಈಗ ಗುಸುಗುಸು
ಜೀರ್ಣೋದ್ಧಾರವಾಗಬೇಕು.!
ಗುಡಿ…….ಕಟ್ಟಿ…!!
ಆದರೆ..ಹಕ್ಕಿಯ ಹಿಕ್ಕೆ
ಗುಡಿಯ ಮೇಲೆ..ಬಿದ್ದರೆ?
ಛೇ…..
ಕತ್ತರಿಸಲೇ..ಬೇಕು..ಮರವ
ಎಂಬ ಠರಾವು….
ತಕ್ಷಣ…..
ಪೇಪರ್ ಸುರಳಿ …ಬಿಚ್ಚಿದ
ವ್ಯಕ್ತಿಯೊಬ್ಬ…ಕೂಗಿದ.
ಈ ರಸ್ತೆ ಅಗಲವಾಗುತ್ತಿದೆ
ಈಗಲ್ಲಿ….
ಗಂಟೆ-ಮರ…ಎರಡೂ
……ಅಗಲಲಿ….ದೆ.!
ನಾರಾಯಣ ಪಿ.ಭಾಗ್ವತ
Olleya kavite super
ಸುಪರ್ ಸರ್
ಧನ್ಯವಾದಗಳು
ಬಹಳ ಅರ್ಥಪೂರ್ಣವಾದ ಕವನ.
ಹುಟ್ಟು
ಬೆಳವಣಿಗೆ
ಉಪಕಾರ
ಅಗಲುವಿಕೆ
ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯ.
ಧನ್ಯವಾದಗಳು ಸರ್
ವಾಸ್ತವ, ಕಾರ್ಮುಗಿಲಿನ ಮಧ್ಯದ ಮಿಂಚಿನಂತೆ ಹೊಳೆಯುತ್ತಿದೆ. ಈ ಕವಿತೆಯಲ್ಲಿ
ಧನ್ಯವಾದಗಳು
ಧನ್ಯವಾದಗಳು ಸರ್