ಕಾವ್ಯ ಸಂಗಾತಿ
ಮಂಡಲಗಿರಿ ಪ್ರಸನ್ನ
ಗಜಲ್
ಸುಡುಬೆಂಕಿಯಲಿ ಬದುಕಿದವಳಿಗೆ ಸ್ತ್ರಿ ಎನಲು ಸಾಕೆ
ನೂರು ನೋವಲಿ ಅರಳಿದವಳಿಗೆ ಸ್ತ್ರಿ ಎನಲು ಸಾಕೆ
ಭೂಭಾರ ಹೊತ್ತ ಭೂದೇವಿಯ ಅಚ್ಚರಿಯು ನೀನು
ಸಹನೆಯಲಿ ಬಿಕ್ಕುತ ನಕ್ಕವಳಿಗೆ ಸ್ತ್ರಿ ಎನಲು ಸಾಕೆ
ಸೆರಗಿನಲಿ ಬೆಂಕಿ ಕಟ್ಟಿ ಬೆಳಕು ಅರಸಿ ಹೊರಟವಳು
ಕಣ್ಣೊಳಗೆ ಕಾಮನೆ ಕಂಡವಳಿಗೆ ಸ್ತ್ರಿ ಎನಲು ಸಾಕೆ
ಶರಧಿಗೆ ಲಗ್ಗೆ ಹಾಕಿ ಬೊಗಸೆಯಲಿ ನೀರು ತಂದಾಕೆ
ಬಿಸಿಲ್ಗುದುರೆಗೆ ಪರಿತಪಿಸಿದವಳಿಗೆ ಸ್ತ್ರಿ ಎನಲು ಸಾಕೆ
ಭೂಮ್ಯಾಕಾಶ ಚಂದ್ರ ನಕ್ಷತ್ರಗಳ ಒಡತಿಯಂತೆ
ತುತ್ತು ತುತ್ತಿಗೆ ಕಂಗಾಲಾದವಳಿಗೆ ಸ್ತ್ರಿ ಎನಲು ಸಾಕೆ
ಈ ಗಜಲ್ ಕವಿ ಜಿ.ಎಸ್.ಶಿವರುದ್ರಪ್ಪ ಅವರ ಕಾವ್ಯ ಸಾಲೊಂದರಿಂದ ಹುಟ್ಟಿದ್ದು. ಕವಿ ಜಿಎಸ್ಎಸ್ ಅವರಿಗೆ ಋಣಿ….