ಮಹಿಳಾ ದಿನದ ವಿಶೇಷ

ಮಹಿಳಾ ದಿನಾಚರಣೆ

ವಿನುತಾ ಹಂಚಿನಮನಿ

ಅಮ್ಮನ ಒಡಲ ಕತ್ತಲೆ ದೂರ ಸರಿಸಿ
ಹೆಣ್ಣು ಭ್ರೂಣಕೆ ಜಗದ ಬೆಳಕು ತೋರುವುದೇ
ಮಹಿಳಾ ದಿನಾಚರಣೆ

ಸಮಾಜದಲಿ ಹೆಣ್ಣಿಗೆ ಅಸಮಾನತೆಯ
ಪರದೆ ಸರಿಸಿ ಸಮ್ಮಾನಿಸುವುದೇ
ಮಹಿಳಾ ದಿನಾಚರಣೆ

ಹೆಣ್ಣಿನ ದೇಹವಲ್ಲದೆ ಆತ್ಮದ ಮೇಲೆಸಗುವ
ಅತ್ಯಾಚಾರ ಅನ್ಯಾಯ ನಿಲ್ಲಿಸುವುದೇ
ಮಹಿಳಾ ದಿನಾಚರಣೆ

ಆಸ್ತಿಯಲಿ ಸಮಪಾಲು ಸುಸ್ತಿಯಲಿ ಸಾಂತ್ವನದ
ನೆರವು ನೀಡಿ ಕಾಪಾಡುವುದೇ
ಮಹಿಳಾ ದಿನಾಚರಣೆ

ಮುಪ್ಪನಲಿ ವೃದ್ಧಾಶ್ರಮ ತಪ್ಪಿಸಿ
ಸಮಾಧಾನದ ಜೀವನ ನೀಡಿ ಸಲಹುವುದೇ
ಮಹಿಳಾ ದಿನಾಚರಣೆ

ಹೌದಾದರೆ ಚಪ್ಪಾಳೆ ಈ ಸಂಭ್ರಮಕೆ
ಇಲ್ಲವಾದರೆ ಸುಮ್ಮನೆ ಊದುವ
ತುತ್ತೂರಿ ಯಾತಕೋ ನಾ ಕಾಣೆ

——————–

ವಿನುತಾ ಹಂಚಿನಮನಿ

One thought on “ಮಹಿಳಾ ದಿನದ ವಿಶೇಷ

Leave a Reply

Back To Top