ಮಹಿಳಾ ದಿನದ ವಿಶೇಷ

ಹೆಣ್ಣಿವಳು ಜಗದ ಕಣ್ಣಿವಳು

ಮಾನಸ ವಿಜಯ್ ಕೈಂತಜೆ

ಪೂಜಿಪ ದೇವರಿಂದ ಮಿಗಿಲು
ಪ್ರೀತಿ ವಾತ್ಸಲ್ಯದ ಮಡಿಲು
ನೋವಿಗೆ ಆಸರೆಯಾಗೊ ಹೆಗಲು
ಮನದೊಳಗೆ ಕಣ್ಣೀರು ಕುದಿದು
ನರಕದ ಎರಕ ಹೊಯ್ದರೂ
ಈಕೆ ಮೌನ ಕಾವ್ಯದ ಹೊನಲು

ಹೆಣ್ಣೆಂದರೆ ಜ್ಯೋತಿ
ಹೆಣ್ಣೆಂದರೆ ಸ್ಪೂರ್ತಿ
ಅವಳೊಳಗಿಹುದು ಅನಂತ ಶಕ್ತಿ
ಅದಮ್ಯ ಸಾಧನೆಯ ಪ್ರಜ್ವಲಿತ ದೀಪ್ತಿ
ವ್ಯಕ್ತಿತ್ವವೇ ಅವಳ ಆಸ್ತಿ

ಬದುಕೆಂಬ ನಾಟಕದಲಿ ಹಲವು ಪಾತ್ರಗಳ –
ಧರಿಸಿ ಸೈ ಎನಿಸುವವಳು ಸ್ತ್ರೀ ಮಾತ್ರ
ಮಗಳು,ಸೋದರಿ, ಅಮ್ಮ,ಸಖಿ, ಗೆಳತಿ
ಎಲ್ಲರೊಳಗೆ ಇರುವವಳಿಗೆ
ನೋವು ಸಂಗಾತಿ ; ಎಷ್ಟು ವಿಚಿತ್ರ


ಮಾನಸ ವಿಜಯ್ ಕೈಂತಜೆ


Leave a Reply

Back To Top