ನೆನಪುಗಳೇ ಹಾಗೆ…

ಕಾವ್ಯ ಸಂಗಾತಿ

ನೆನಪುಗಳೇ ಹಾಗೆ…

ಹಮೀದಾ ಬೇಗಂ ದೇಸಾಯಿ

ನೆನಪುಗಳೇ ಹಾಗೆ
ಚುಚ್ಚುತ್ತವೆ ಮುಳ್ಳುಗಳಾಗಿ

ಕಾಡುತ್ತವೆ ಆಗಾಗ
ಹಟಮಾರಿ ಮಗುವಿನಂತೆ

ರಮಿಸುತ್ತವೆ ಒಮ್ಮೊಮ್ಮೆ
ತಲೆ ನೇವರಿಸುತ್ತ..

ಹುಡುಕಾಡುತ್ತವೆ
ಮನದೊಳಗಿಳಿದು

ಮರುಕಳಿಸಿ ಕಳವಳಿಸಿ
ತಳಮಳಿಸುತ್ತವೆ

ಸ್ಪರ್ಶಿಸುತ್ತವೆ ನವುರಾಗಿ
ನವಿಲುಗರಿಯಂತೆ

ಮರೆಯಲಡಗಿದ ಹೂಗಳಂತೆ
ಘಮಘಮಿಸುತ್ತವೆ

ನೆನಪುಗಳೇ ಹಾಗೆ
ಹೀಗೆ ಬಂದು ಹಾಗೇ ಹೋಗುತ್ತವೆ…


Leave a Reply

Back To Top