ಕಾವ್ಯ ಸಂಗಾತಿ
ಕ್ಷಮಿಸಿಬಿಡು
ಇಮಾಮ್ ಮದ್ಗಾರ್


ಉಕ್ಕುತ್ತಿದೆ ದುಃಖ
ಬಿಕ್ಕುತ್ತಿದೆ ಮನಸು
ನಿನ್ನ ಕನಸಿನ ಹಾದಿಗೆ
ಬೆಳಕಗಾಲಿಲ್ಲ
ಕ್ಷಮಿಸಿಬಿಡು
ಒಲವ ದಾರಿ
ಹುಡುಕುವ ನಿನ್ನ
ಕನಸಿನ ದಾರಿಗೆ
ನಾನೇ ಕಾಲ್ತೊಡಕು
ಕ್ಷಮಿಸಿಬಿಡು
ಸುಮ್ಮನಿರು ಮನವೇ..
ಸಾವ ಹೆಗಲ ತಬ್ಬಿ ಮಲಗಿದ
ಕನಸುಗಳ ಕೆದಕಬೇಡ
ಶರಣಾಗಿವೆ ಸಾವಿಗೆ
ಎಲ್ಲ ಮರೆತು !!!
ನೀ ಮತ್ತೆ ನೆನಪಿಸಿ
ಕಾಡಬೇಡ ಕ್ಷಮಿಸಿಬಿಡು
ಒಲವ ಗಿಡದ ಬೇರು
ಪ್ರೇಮದಾ..ಳಕೆ ಇಳಿದು
ಎದೆಯ ಬಳ್ಳಿಗೆ ನೀರುಣಿಸಿ
ಒಲವ ಹೂವು ಅರಳಿಸಿತ್ತು
ಅರಳಿದ ಹೂ ಮುಡಿಯಲ್ಲಿಲ್ಲ
ಕ್ಷಮಿಸಿಬಿಡು
ನನ್ನೆದೆಯಲಿ ನಿನ್ನ ಬಿಂಬ ಅಮರ
ಆದರೂ..ನನ್ನ ಕಣ್ಣ
ಪರದೆಯಲಿ ನಿನ್ನ ಚಿತ್ರ ಹಿಡಿದಿಟ್ಟು
ಕೊಳ್ಳಬೇಕೆಂದೆ
ಕ್ಷಮಿಸಿಬಿಡು
ಮನಸಿನ ಕನ್ನಡಿ
ಒಡೆದು ಹೋಯಿತು !!!!